ಪುತ್ತೂರು: ಈಗಾಗಲೇ ಟೀಸರ್ ಮತ್ತು ಹಾಡುಗಳ ಮೂಲಕ ಸದ್ದು ಮಾಡಿರುವ ‘ದೇವ್ ದಾಸ್ ನ ಲೀಲಾ’ ತುಳು ಸಿನಿಮಾ ಎ.24ರಂದು ಕರಾವಳಿಯಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರದ ಮೂಲಕ ತುಳು ಚಲನ ಚಿತ್ರಕ್ಕೆ ಮೊದಲ ಬಾರಿಗೆ ಬಾಲಿವುಡ್ ಟಚ್ ನೀಡಲಾಗಿದೆ.
ಪತ್ರಿಕಾಗೋಷ್ಟಿಯಲ್ಲಿ ಚಿತ್ರದ ನಾಯಕ ಎಲ್ಟನ್ ಜೆಫ್ ಅವರು ಮತ್ತು ಚಿತ್ರದ ಪ್ರೋಡ್ಯೂಸರ್ ದೀಪಕ್ ಸಿಂಗ್ ಮಾತನಾಡಿ, ಎ.24ಕ್ಕೆ ದೇವ್ ದಾಸ್ ನ ಲೀಲಾ ಎಂಬ ವಿಭಿನ್ನ ಶೈಲಿಯ ತುಳು ಚಲನ ಚಿತ್ರ ಬಿಡುಗಡೆಯಾಗಲಿದೆ. ಚಿತ್ರವನ್ನು ಜಯಂತಿ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಾಗಿದೆ.



ಇದು ನನ್ನ ನಾಲ್ಕನೆ ಸಿನಿಮಾ ಆಗಿದೆ. ಈಗಿನ ಜನಾಂಗಕ್ಕೆ ಅಗತ್ಯತೆ ಇರುವ ಮತ್ತು ಕಥೆಯಲ್ಲೂ ಒಂದು ಉತ್ತಮ ಸಂದೇಶವಿರುವ ಚಿತ್ರವಾಗಿದೆ. ದೇವ್ ದಾಸ್ ನ ಲೀಲಾ ಡ್ಯಾನ್ಸ್ ಆಂಥೆಮ್ ಹಾಡಿನಲ್ಲಿ ಬಾಲಿವುಡ್ ಖ್ಯಾತ ಕೋರಿಯೋಗ್ರಾಫರ್ ಗಳಾದ ರೆಮೋ ಡಿಸೋಜಾ, ಗೀತಾ ಕಪೂರ್, ಟೆರಾನ್ಸ್ ಲೂಯಿಸ್, ಪುನೀತ್, ರಜಿತ್ ದೇವ್ ಮುಂತಾದವರು ಹೆಜ್ಜೆ ಹಾಕಿದ್ದಾರೆ. ಇದು ಪ್ರಥಮ ಬಾರಿಗೆ ತುಳು ಸಿನಿಮಾಗೆ ಬಾಲಿವುಡ್ನ ಟಚ್ ನೀಡಲಾಗಿದೆ ಎಂದವರು ಹೇಳಿದರು.





ಚಿತ್ರದ ನಿರ್ದೇಶಕ ಮತ್ತು ಪ್ರೊಡ್ಯೂಸರ್ ಆಗಿರುವ ಬಾಲಿವುಡ್ನಲ್ಲಿ ನೃತ್ಯಸಂಯೋಜಕರಾಗಿ ಈಗಾಗಲೇ ಹೆಸರು ಮಾಡಿರುವ ತೇಜೇಶ್ ಪೂಜಾರಿ ಅವರು ಮಾತನಾಡಿ ದೇವ್ ದಾಸ್ ನ ಲೀಲಾ ಚಿತ್ರದಲ್ಲಿ ತುಳು ದಿಗ್ಗಜರಾದ ನವೀನ್ ಡಿ ಪಡೀಲ್, ದೇವದಾಸ್ ಕಾಪಿಕಾಡ್, ಅರವಿಂದ ಬೋಳಾರ್ ಮತ್ತು ಅನೂಪ್ ಸಾಗರ್ ಅದ್ವಿತಿ ಶೆಟ್ಟಿ ಪ್ರಮುಖವಾಗಿ ಕಾಣಿಸಿದ್ದಾರೆ.
ಸಹಾಯಕ ನಿರ್ದೇಶಕ ಯಶ್ವಿನ್ ದೇವಾಡಿಗ, ನಟಿ ಅನುಷಾ ರಾಜ್,ಚಿತ್ರದ ವಿತರಕ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.



