ಕಡಬ : 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಸರಸ್ವತೀ ವಿದ್ಯಾಲಯ ಪ್ರೌಢಶಾಲೆ ಕಡಬವು ಉತ್ತಮ ಸಾಧನೆ ದಾಖಲಿಸಿದೆ. ಈ ಬಾರಿ ಒಟ್ಟು 33 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 7 ಮಂದಿ ಡಿಸ್ಟಿಂಕ್ಷನ್, 15 ಮಂದಿ ಪ್ರಥಮ ಶ್ರೇಣಿ, 8 ಮಂದಿ ದ್ವಿತೀಯ ಶ್ರೇಣಿ ಹಾಗೂ 2 ಮಂದಿ ತೃತೀಯ ಶ್ರೇಣಿಯೊಂದಿಗೆ ಉತ್ತೀರ್ಣರಾಗಿದ್ದಾರೆ. ಈ ಮೂಲಕ ಶಾಲೆಯ ಒಟ್ಟು ಫಲಿತಾಂಶ ಶೇಕಡಾ 97 ದಾಖಲಾಗಿದೆ.


ಕೇನ್ಯ ಗ್ರಾಮದ ಕಾಯಂಬಾಡಿ ಮನೆಯ ಶ್ರೀ ಸೀತಾರಾಮ ಗೌಡ ಕೆ ಮತ್ತು ಯೋಗಿತ ಕೆ ದಂಪತಿ ಪುತ್ರಿ ಸಿಂಚನ ಕೆ ಎಸ್ 584 (93.44%) ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಕೋಣಾಜೆ ಗ್ರಾಮದ ಬೊಳೋಳಿ ಮನೆಯ ಶ್ರೀ ನಾರಾಯಣ ಗೌಡ ಬಿ ಹಾಗೂ ಪುಷ್ಪಾವತಿ ಕೆ ದಂಪತಿ ಪುತ್ರ ಪೂರ್ವಿತ್ ಎನ್ ಪಿ 574 (91.84%) ಮತ್ತು ಶ್ರೀ ಗೋಪಾಲಕೃಷ್ಣ ಹಾಗೂ ಮೋಹಿನಿ ದಂಪತಿ ಪುತ್ರಿ ಸಿಂಚನ 574 (91.84%) ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಹಂಚಿಕೊಂಡಿದ್ದಾರೆ.
ಕಡಬ ಗ್ರಾಮದ ಅಲಾರ್ಮೆ ಮನೆಯ ಶ್ರೀ ಕುಮಾರ ಗೌಡ ಹಾಗೂ ವಿಮಲ ದಂಪತಿ ಪುತ್ರಿ ದೀಪ್ತಿ 571 (91.36%), ಕುಟ್ರುಪ್ಪಾಡಿ ಗ್ರಾಮದ ಮಠಂತ್ತಾಡಿ ಮನೆಯ ಶ್ರೀ ಜನಾರ್ಧನ ಗೌಡ ಹಾಗೂ ಉಮಾವತಿ ಕೆ ಎಲ್ ಅವರ ಪುತ್ರಿ ರಕ್ಷಾ ಎಂ ಜೆ 567 (90.72%), ಕುತ್ಕೂಂಜ ಗ್ರಾಮದ ಕರ್ಮಾಜೆ ಮನೆಯ ಶ್ರೀ ನಾರಾಯಣ ಹಾಗೂ ನಳಿನಿ ದಂಪತಿ ಪುತ್ರ ಚಿಂತನ್ ಕೆ 557 (89.12%), ಎಡಮಂಗಲ ಗ್ರಾಮದ ಪರ್ಲಮನೆಯ ಪ್ರವೀಣ್ ಕುಮಾರ್ ಪಿ ಹಾಗೂ ಗೀತಾವತಿ ಕೆ ಸಿ ದಂಪತಿ ಪುತ್ರ ಕೀರ್ತನ್ ಕುಮಾರ್ ಪಿ 543 (86.88%) ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಒಟ್ಟಾರೆ 33 ವಿದ್ಯಾರ್ಥಿಗಳಲ್ಲಿ 7 ಮಂದಿ ಅತ್ಯುತ್ತಮ ಶ್ರೇಣಿ, 15 ಮಂದಿ ಪ್ರಥಮ ಶ್ರೇಣಿ, 8 ಮಂದಿ ದ್ವಿತೀಯ ಶ್ರೇಣಿ ಮತ್ತು 2 ಮಂದಿ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿ, ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.




ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ, ಪೋಷಕರು ಹಾಗೂ ವಿದ್ಯಾರ್ಥಿವೃಂದ ಅಭಿನಂದನೆ ಸಲ್ಲಿಸಿದ್ದಾರೆ.




