ಕಡಬ: ಪಟ್ಟಣದ ಜೆ.ಎಂ.ಜೆ. ಹಾಸ್ಪಿಟಲ್ ವತಿಯಿಂದ ಏಪ್ರಿಲ್ 26ರಂದು ಉಚಿತ ಮೆಗಾ ಹೆಲ್ತ್ ಕ್ಯಾಂಪ್ ಆಯೋಜಿಸಲಾಗಿದೆ.

ಬೆಳಗ್ಗೆ 9.30ರಿಂದ ಮಧ್ಯಾಹ್ನ 1.00ರವರೆಗೆ ನಡೆಯಲಿರುವ ಈ ಶಿಬಿರದಲ್ಲಿ ವಿವಿಧ ಆರೋಗ್ಯ ತಪಾಸಣೆಗಳನ್ನು ಉಚಿತವಾಗಿ ನಡೆಸಲಾಗುತ್ತದೆ. NITTE (Deemed to be University) ಜೆಸ್ಟಿಸ್. ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ಮಂಗಳೂರು ಇದರ ಸಹಯೋಗದಲ್ಲಿ ಶಿಬಿರ ನಡೆಯಲಿದೆ.
ಶಿಬಿರದಲ್ಲಿ ಲಭ್ಯವಾಗುವ ಪ್ರಮುಖ ಸೇವೆಗಳು:
ಪೀಡಿಯಾಟ್ರಿಕ್ (ಮಕ್ಕಳ ತಪಾಸಣೆ)
ಇಎನ್‌ಟಿ (ಕಿವಿ, ಮೂಗು, ಗಂಟಲು)
ಒಪ್ತಾಲ್ಮಾಲಜಿ (ಕಣ್ಣು ತಜ್ಞರು )
ಕಾರ್ಡಿಯಾಲಜಿ (ಹೃದಯ ತಪಾಸಣೆ)
ಜನರಲ್ ಮೆಡಿಸಿನ್
ಆರ್ಥ್ತೋ (ಮೂಳೆ )ತಪಾಸಣೆ
ಇದಲ್ಲದೆ, ಉಚಿತವಾಗಿ ಬಿಪಿ, ಶುಗರ್ ಪರೀಕ್ಷೆಗಳು ಹಾಗೂ ಇಸಿಜಿ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಅಗತ್ಯವಿರುವವರಿಗೆ ಮುಂದಿನ ಚಿಕಿತ್ಸೆಗೆ ಮಾರ್ಗದರ್ಶನವೂ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆಗಳು: 6361713442 / 08251 260122.
“ನಿಮ್ಮ ಆರೋಗ್ಯ – ನಮ್ಮ ಆದ್ಯತೆ” ಎಂಬ ಘೋಷಣೆಯೊಂದಿಗೆ ಈ ಶಿಬಿರವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವಂತೆ ಆಸ್ಪತ್ರೆ ಆಡಳಿತ ಮನವಿ ಮಾಡಿದೆ.

Leave a Reply

Your email address will not be published. Required fields are marked *