ಸುಳ್ಯ: ಮಹಿಳಾ ಮೀಸಲಾತಿ ಮಸೂದೆ ಜಾರಿಯಾಗದಂತೆ ತಡೆದ ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳ ನಿಲುವನ್ನು ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ಮಂಡಲ ಸಮಿತಿ ವತಿಯಿಂದ ಸುಳ್ಯದಲ್ಲಿ ಪ್ರತಿಭಟನಾ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಮುಖಂಡರು, ಮಹಿಳೆಯರ ಹಕ್ಕಿನ ವಿಷಯದಲ್ಲಿ ವಿರೋಧ ಪಕ್ಷಗಳು ರಾಜಕೀಯ ನಡೆಸುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಹಿಳಾ ಮೀಸಲಾತಿ ಭಿಕ್ಷೆಯಲ್ಲ, ಅದು ಸಂವಿಧಾನಬದ್ಧ ಹಕ್ಕು ಎಂದು ಅವರು ಒತ್ತಿ ಹೇಳಿದರು.




ಪ್ರತಿಭಟನೆಯಲ್ಲಿ ಭಾಗೀರಥಿ ಮುರುಳ್ಯ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ ವಳಲಂಬೆ, ಮಹಿಳಾ ಮೋರ್ಚಾ ಮಂಡಲ ಅಧ್ಯಕ್ಷೆ ಇಂದಿರ ಬಿ.ಕೆ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡಂಜಿ, ಮಂಡಲ ಪ್ರಧಾನ ಕಾರ್ಯದರ್ಶಿ ವಿನಯ್ ಕುಮಾರ್ ಕಂದಡ್ಕ, ಕೋಶಾಧಿಕಾರಿ ಸುಭೋದ್ ಶೆಟ್ಟಿ ಮೇನಾಲ, ಬಿಜೆಪಿ ಸುಳ್ಯ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಾದರ ಎ.ಟಿ ಸೇರಿದಂತೆ ಹಲವರು ಭಾಗವಹಿಸಿದರು.
ಇದಲ್ಲದೆ ಆಶಾ ತಿಮ್ಮಪ್ಪ, ಗುಣವತಿ ಕುಳ್ಳಂತಡ್ಕ, ಶ್ರೀಕಾಂತ್ ಮಾವಿನಕಾಯಿ, ಸುನಿಲ್ ಕೆರ್ಪಲ, ಎಸ್.ಎಂ. ನಾರಾಯಣ ಶಾಂತಿನಗರ,ಪ್ರದೀಪ್ ಕೊಲ್ಲರಮೂಲೆ, ಶಶಿಕಲ ನೀರಬಿದ್ದೆ, ಪುಷ್ಪ ಮೇದಪ್ಪ, ಭಾರತಿ ಉಳುವಾರು, ಮಮತಾ ಬೊಳುಗಲ್ಲು, ಪ್ರಸಾದ್ ಕಾಟೂರು, ಬುದ್ಧನಾಯ್ಕ, ಜಿನ್ನಪ್ಪ ಪೂಜಾರಿ, ಅವಿನಾಶ್ ಕುರುಂಜಿ, ಶಾಂತರಾಮ ಕಣಿಲೆಗುಂಡಿ, ಜಗನ್ನಾಥ ಜಯನಗರ, ಅಶೋಕ್ ಅಡ್ಕರ್ ವಿಜಯ ಹಾಲಡ್ಕ, ಸತ್ಯವತಿ ಬಸವನಪಾದೆ, ಜಯಂತಿ ಜನಾರ್ದನ, ಶಾರದ ಶೆಟ್ಟಿ, ಆಚಾರೈ ಚಂದ್ರಾವತಿ, ಲೋಲಾಕ್ಷಿ ದಾಸನಕಜೆ, ಸೀತಾ ಸದಾನಂದ, ವೀಣಾ ಮೌಂಟಡ್ಕ, ಕಿಶೋರಿ ಶೇಟ್, ಶೀಲಾ ಅರುಣ ಕುರುಂಜಿ, ರಂಜಿತ್ ಎನ್.ಆರ್, ಪುರುಷೋತ್ತಮ ಬೊಡ್ಡನಕೊಚ್ಚಿ, ಧನಂಜಯ ಕುಂಚಡ್ಕ, ಶಿವರಾಮ ಕೇರ್ಪಲ ಮತ್ತಿತರರು ಉಪಸ್ಥಿತರಿದ್ದರು.


