ಬೆಂಗಳೂರು/ಕರಾವಳಿ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ್ ಬಿಲಿಮಳೆ ಅವರು ಯಕ್ಷಗಾನ ಕಲಾವಿದರನ್ನು ಕುರಿತು ಮಾಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಯಕ್ಷಗಾನ ಕಲಾವಿದರನ್ನು ಸಲಿಂಗಕಾಮಿಗಳು ಎಂದು ಉಲ್ಲೇಖಿಸಿರುವುದಾಗಿ ಆರೋಪ ಹೊರಬಿದ್ದಿದ್ದು, ಕರಾವಳಿ ಭಾಗದಲ್ಲಿ ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಸ್ಥಳೀಯ ಯಕ್ಷಗಾನ ಕಲಾವಿದರು ಹಾಗೂ ವಿವಿಧ ಹಿಂದು ಸಂಘಟನೆಗಳು, “ಈ ಹೇಳಿಕೆ ಯಕ್ಷಗಾನ ಕಲಾವಿದರ ಅವಮಾನ ಮಾತ್ರವಲ್ಲ; ಇಡೀ ಹಿಂದೂ ಸಮಾಜಕ್ಕೆ ಮಾಡಿದ ಅವಮಾನ” ಎಂದು ಕಿಡಿಕಾರಿವೆ. ಕರಾವಳಿಯ ಕಲೆ ಹಾಗೂ ಸಂಸ್ಕೃತಿ ಬಗ್ಗೆ ಸರ್ಕಾರಕ್ಕೆ ಗೌರವವಿದ್ದರೆ ಇಂತಹ ಹೇಳಿಕೆ ಹೊರಬರುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಸಂಘಟನೆಗಳು, ಕನ್ನಡ ಪ್ರಾಧಿಕಾರದ ಅಧ್ಯಕ್ಷರನ್ನು ತಕ್ಷಣವೇ ಹುದ್ದೆಯಿಂದ ದೂರ ಮಾಡಬೇಕೆಂದು ಆಗ್ರಹಿಸಿವೆ. ಪಕ್ಷಾತೀತವಾಗಿ ಈ ಹೇಳಿಕೆಯ ವಿರುದ್ಧ ಹೋರಾಟ ನಡೆಸುವ ಅಗತ್ಯವಿದೆ ಎಂದು ಕರಾವಳಿ ಪ್ರದೇಶದ ಹಲವು ಸಂಘಟನೆಗಳು ಧ್ವನಿಸಿವೆ.

ಈ ನಡುವೆ, ವಿಷಯದ ಕುರಿತು ಸರ್ಕಾರದ ಸ್ಪಷ್ಟನೆ ಮತ್ತು ಮುಂದಿನ ಕ್ರಮಗಳತ್ತ ಎಲ್ಲರ ಗಮನ ಹರಿದಿದೆ..

Leave a Reply

Your email address will not be published. Required fields are marked *