ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪಡೂರು ಗ್ರಾಮದ ವಿಶ್ವ ಹಿಂದೂ ಪರಿಷದ್ ಪುತ್ತೂರು ಶ್ರೀ ವೀರಾಂಜನೇಯ ಕ್ಷೇತ್ರ ನೆಲಪ್ಪಾಲುವಿನಲ್ಲಿ ಕೇಸರಿ ನಂದನ ವೀರಾಂಜನೇಯ ಕ್ಷೇತ್ರದ ಕಾರ್ಯಾಲಯದ ನೂತನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮವು ನ.22ರಂದು ನಡೆಯಲಿದೆ.




ನ.21ರ ಇಂದು ಸಂಜೆ 6.00 ರಿಂದ ಕಟ್ಟಡದ ವಾಸ್ತು ಹೋಮ, ವಾಸ್ತು ಬಲಿ ಪೂಜೆ ಇತ್ಯಾದಿ ಧಾರ್ಮಿಕ ಕಾರ್ಯಗಳು ನಡೆದು, ನ.22ರ ಶನಿವಾರದಂದು ಬೆಳಿಗ್ಗೆ 8.00 ಗಂಟೆಗೆ ಗಣಹೋಮ, ಸಂಜೆ 6.00ರಿಂದ ಭಜನೆ, ನಡೆಯಲಿದ್ದು, ಬಳಿಕ ಭಗವದ್ವಜಕಟ್ಟೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಪಡೀಲು ಪ್ರಶಾಂತ್ ಪೈಂಟ್ಸ್ ನ ಮಾಲಕರಾದ ಪ್ರಶಾಂತ್ ಶೆಣೈಯವರು ಭಗವದ್ವಜಕಟ್ಟೆ ಉದ್ಘಾಟಿಸಲಿದ್ದು, ದ.ಕ. ಜಿಲ್ಲೆಯ ಮಾಜಿ ಲೋಕಸಭಾ ಸದಸ್ಯರಾದ ನಳೀನ್ ಕುಮಾರ್ ಕಟೀಲು ಅವರು ಕಟ್ಟಡ ಲೋಕಾರ್ಪಣೆ ಮಾಡಲಿದ್ದಾರೆ.. ನಳೀಲು ಸುಬ್ರಹ್ಮಣ್ಯ ದೇವಸ್ಥಾನದ ಮೊಕ್ತೇಸರರಾದ ಸಂತೋಷ್ ಕುಮಾರ್ ರೈ ನಳೀಲು ನಾಮಫಲಕ ಅನಾವರಣ ಮಾಡಲಿದ್ದು, ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಮನೋಜ್ ಶಾಸ್ತ್ರೀ ಸಹಸ್ರಮ್ ಸಿಟಿ ನೆಲಪ್ಪಾಲು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.. ಬಳಿಕ ವೀರಾಂಜನೇಯನಿಗೆ ವಿಶೇಷ ಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮದಲ್ಲಿ ಭಗವಗ್ಭಕ್ತರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ದೇವರ ಕೃಪೆಗೆ ಪಾತ್ರರಾಗಬೇಕೆಂದು ವಿಶ್ವ ಹಿಂದೂ ಪರಿಷದ್ ಪುತ್ತೂರು ಹಾಗೂ ಶ್ರೀ ವೀರಾಂಜನೇಯ ಕ್ಷೇತ್ರ ನೆಲಪ್ಪಾಲು ಇದರ ಅಧ್ಯಕ್ಷರು , ಕಾರ್ಯದರ್ಶಿ ಹಾಗೂ ಸರ್ವ ಸದಸ್ಯರು ವಿನಂತಿಸಿಕೊAಡಿದ್ದಾರೆ.



