ಬಂಟ್ವಾಳ : ಯುವವಾಹಿನಿ (ರಿ.) ಬಂಟ್ವಾಳ ಘಟಕದ ಆಶ್ರಯದಲ್ಲಿ ಸೇವಾ ಚಟುವಟಿಕೆಗಳ ಸಹಾಯಾರ್ಥವಾಗಿ ಬಂಟ್ವಾಳ ತಾಲೂಕು ಮಟ್ಟದ 12 ತಂಡಗಳ ಬೈದ್ಯಶ್ರೀ ಪ್ರೀಮಿಯರ್ ಲೀಗ್ ಬಿಲ್ಲವ ಕ್ರಿಕೆಟ್ ಪಂದ್ಯಾಟ *ಬೈದ್ಯಶ್ರೀ ಟ್ರೋಫಿ 2025″ ನವೆಂಬರ್22 ಮತ್ತು 23 ರಂದು ಬಂಟ್ವಾಳ ಭಂಡಾರಿಬೆಟ್ಟು ಎಸ್ ವಿ ಎಸ್ ಶಾಲಾ ಮೈದಾನದಲ್ಲಿ ನಡೆಯಲಿದೆ.

ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ ಮಾಲಕತ್ದದ ಟೀಮ್ ಬ್ರಹ್ಮಶ್ರೀ ಸಜೀಪ, ರಂಜಿತ್ ಬಿಸಿರೋಡ್ ಮಾಲಕತ್ದದ ಬಿಲ್ಲವ ವಾರಿಯರ್ಸ್ ಬಂಟ್ವಾಳ ಪೃಥ್ವಿರಾಜ್ ಮಣಿಹಳ್ಳ ಮಾಲಕತ್ದದ ಬಿರುವೆರ ಕನಸು ಮಣಿಹಳ್ಳ, ವಿಕ್ರಮ್ ಶಾಂತಿ ಕೆರೆಕೋಡಿಗುತ್ತು ಮಾಲಕತ್ದದ ಶ್ರೀ ಗುರು ಫ್ರೆಂಡ್ಸ್ ಬೀಯಪಾದೆ ಸಾಗರ್ ಸನಿಲ್ ಅಲ್ಲಿಪಾದೆ ಮಾಲಕತ್ದದ ಸನಿಲ್ ಬಿರುವೆರ್ ಅಲ್ಲಿಪಾದೆ, ನಾಗೇಶ್ ಪೂಜಾರಿ ಎಲಾಬೆ ಮಾಲಕತ್ದದ ಬಿಲ್ಲವ ಫ್ರೆಂಡ್ಸ್ ದಿಂಡಿಕೆರೆ ನಿಕೇಶ್ ಕೋಟ್ಯಾನ್ ಮಾಲಕತ್ದದ ಬ್ರಾಂಡ್ ಬಿರುವೆರ್ ಕೇವ ಸಂತೋಷ್ ಪೂಜಾರಿ ಮಧ್ವ ಮಾಲಕತ್ದದ MSK ಬಿರ್ವಸ್ ಮಧ್ವ ಅಶ್ವಿನ್ ಪೂಜಾರಿ ಕಾರಾಜೆ ಮಾಲಕತ್ದದ ಬಿರ್ವ ಬ್ರದರ್ಸ್ ಕಾರಾಜೆ, ತಾರಾನಾತ್ ಪೂಜಾರಿ ಅಮ್ಮ್ಟಾಡಿ ಮಾಲಕತ್ದದ ಕೋಟಿ ಚೆನ್ನಯ ಕ್ರಿಕೆಟರ್ಸ್ ಅಮ್ಮ್ಟಾಡಿ, ನಾರಾಯಣ ಪೂಜಾರಿ ಕಡೆಶೀವಾಲಯ ಮಾಲಕತ್ದದ ಬಿರುವೆರ್ ಕಡೆಶೀವಾಲಯ, ಪ್ರವೀಣ್ ಪೂಜಾರಿ ಕುದನೆ ಮಾಲಕತ್ದದ ಬಿಲ್ಲವ ಪ್ಯಾಂಥರ್ಸ್ ಹನುಮಾನ್ ನಗರ ಹೀಗೆ ಒಟ್ಟು 12 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿವೆ.

ಉದ್ಘಾಟನಾ ಸಮಾರಂಭ : ಬಂಟ್ವಾಳ ತಾಲೂಕು ಬೆಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಕ್ರಿಕೆಟ್ ಪಂದ್ಯಾಟ ಉದ್ಘಾಟಿಸಿದ್ದಾರೆ ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ನಾಗೇಶ್ ಪೂಜಾರಿ ನೈಬೇಲು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ಲೋಕೇಶ್ ಕೋಟ್ಯಾನ್, ಕ್ರೀಡಾ ನಿರ್ದೇಶಕ ತಾರಾನಾಥ್ ಕೋಟ್ಯಾನ್ ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್‌ಚಂದ್ರ ಡಿ. ಸುವರ್ಣ , ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ ವಾಸು ಪೂಜಾರಿ ಲೊರೆಟ್ಟೋ, ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್, ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾದ ಪ್ರತಿಭಾ ಕುಳಾಯಿ, ಬಿರುವೆರ್ ಕುಡ್ಲ ಸಂಸ್ಥಾಕ ಉದಯ ಪೂಜಾರಿ, ಬಿಲ್ಲವ ಬ್ರಿಗೇಡ್ ಅಧ್ಯಕ್ಷ ಸದಾನಂದ ಪೂಜಾರಿ, ವೈದ್ಯಾಧಿಕಾರಿ ಡಾ.ರಾಜೇಶ್ ಬಾರ್ದಿಲ,ಉದ್ಯಮಿ‌ ಓಂಪ್ರಸಾದ್ ಬಾರ್ದಿಲ, ನಮ್ಮ ಬಂಟ್ವಾಳ ನ್ಯೂಸ್ ಚಾನಲ್ ಮಾಲಕ ಪ್ರಶಾಂತ್ ಪೂಂಜಾಲಕಟ್ಟೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಸಮಾರೋಪ ಸಮಾರಂಭ :  ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಟ್ರಷ್ಟೀ ಜಗದೀಪ್ ಡಿ. ಸುವರ್ಣ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಜಯಪ್ರಕಾಶ್ ಜೆ.ಎಸ್ , ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪೂಜಾರಿ ಮೆಲ್ಕಾರ್ , ಸಿದ್ದಕಟ್ಟೆ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಮಂಜಿಲ, ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಅಧ್ಯಕ್ಷ ವೀರೇಂದ್ರ ಬಿ. ಅಮೀನ್, NSUI ರಾಜ್ಯ ಕಾರ್ಯದರ್ಶಿ ಅನ್ವಿತ್ ಕಟೀಲ್, ಮಂಗಳೂರು ಮಹಾನಗರಪಾಲಿಕೆ ಮಾಜಿ ಸದಸ್ಯರಾದ ಅನಿಲ್ ಕುಮಾರ್, ಕಿರಣ್ ಕೋಡಿಕಲ್ ಬಿಜೆಪಿ ಬಂಟ್ವಾಳ ಮಂಡಲ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ ಗುರುಕೃಪಾ, ಉದ್ಯಮಿ ಪುರುಷೋತ್ತಮ ಕಾರಾಜೆ, ಮಣಿನಾಲ್ಕೂರು ಬಿಲ್ಲವ ಸಮಾಜ ಸೇವಾ ಸಂಘ, ಅಧ್ಯಕ್ಷ ಸಂಜೀವ ಪೂಜಾರಿ ಕಟ್ಟದಡೆ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಯುವವಾಹಿನಿ ಬಂಟ್ವಾಳ ಘಟಕದ ಕಾರ್ಯದರ್ಶಿ ಮಧುಸೂದನ್ ಮದ್ವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *