ಪುತ್ತೂರು: ಪುತ್ತೂರು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ವತಿಯಿಂದ ಆಯೋಜಿಸಲಾಗುತ್ತಿರುವ ಮೂರನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ, ಸಾಮೂಹಿಕ ವಿವಾಹ ಹಾಗೂ ಹಿಂದವೀ ಸಮಾಜೋತ್ಸವ ಕಾರ್ಯಕ್ರಮದ ಬ್ಯಾನರ್‌ಗೆ ಕಿಡಿಗೇಡಿಗಳು ಹಾನಿ ಮಾಡುವ ಘಟನೆ ಬಲ್ನಾಡಿನಲ್ಲಿ ವರದಿಯಾಗಿದೆ.



ಈ ಘಟನೆ ಹಿನ್ನೆಲೆಯಲ್ಲಿ ಟ್ರಸ್ಟ್‌ನ ಪ್ರಮುಖರು ವಿಷಾದ ವ್ಯಕ್ತಪಡಿಸಿದ್ದು, ಸಂಘರ್ಷ ಅಥವಾ ವಾಗ್ವಾದಗಳಲ್ಲಿ ತೊಡಗಿಕೊಳ್ಳದೇ ದೇವರ ಮೊರೆ ಹೋಗಿ ಸಾಮೂಹಿಕ ಪ್ರಾರ್ಥನೆ ನಡೆಸುವ ತೀರ್ಮಾನ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಬ್ಯಾನರ್ ಹಾನಿ ಪ್ರಕರಣ ಸ್ಥಳೀಯರಲ್ಲಿ ಅಸಮಾಧಾನ ಮೂಡಿಸಿದ್ದರೂ, ಕಾರ್ಯಕ್ರಮ ಆಯೋಜಕರು ಶಾಂತಿಯುತ ಕ್ರಮವನ್ನು ಅನುಸರಿಸುವುದಾಗಿ ತಿಳಿಸಿದ್ದಾರೆ.




