ಚಿತ್ರದುರ್ಗ: ಪೋಕ್ಸೊ ಪ್ರಕರಣದಲ್ಲಿ ಸಿಲುಕಿದ್ದ ಚಿತ್ರದುರ್ಗದ ಮುರುಘಾಶ್ರೀ ಬಿಡುಗಡೆಯೊ,ಬಂಧನವೊ ಎಂದು ಇಂದು ನಿರ್ಧಾರ ಆಗಲಿದೆ.

2022ರ ಆಗಸ್ಟ್ 26 ರಂದು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸತತ 3 ವರ್ಷಗಳ ಕಾಲ ಪೋಕ್ಸೊ ಕೇಸ್ ವಿಚಾರಣೆ ನಡೆಸಲಾಗಿದೆ.

ಈ ಕೇಸ್ ಅಂತಿಮಘಟ್ಟಕ್ಕೆ ಬಂದು ತಲುಪಿದ್ದು, ಚಿತ್ರದುರ್ಗದ 2ನೇ ಜಿಲ್ಲಾ ಅಪರ ಮತ್ತು ಸತ್ರ ನ್ಯಾಯಾಲಯದಲ್ಲಿ ತೀರ್ಪು ಹೊರಬೀಳಲಿದೆ. ಹೀಗಾಗಿ ಮುರುಘಾಶ್ರೀ ಸೇರಿದಂತೆ ಬೆಂಬಲಿಗರು ಹಾಗೂ ಭಕ್ತರಲ್ಲಿ ಟೆನ್ಷನ್ ಶುರುವಾಗಿದೆ. ಹಾಗೆಯೇ ಸಂತ್ರಸ್ತೆಯರ ಕುಟುಂಬದಲ್ಲೂ ಆತಂಕ ಮನೆ ಮಾಡಿದ್ದು, ಎಲ್ಲರಚಿತ್ತ ನ್ಯಾಯಾಲಯದ ತೀರ್ಪಿನತ್ತ ನೆಟ್ಟಿದೆ.

Leave a Reply

Your email address will not be published. Required fields are marked *