ಮಂಗಳೂರು: ರಾಜ್ಯದಲ್ಲಿರುವ ಶಬರಿಮಲೆ ಅಯ್ಯಪ್ಪ ದೇವಸ್ಥಾನವು ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದ್ದು ಜನವರಿ ತಿಂಗಳಲ್ಲಿ ಆಚರಿಸಲಾಗುವ ಮಕರ ಸಂಕ್ರಾಂತಿಯ ಮಕರ ಜ್ಯೋತಿಗೆ ನವಂಬರ್‌ ತಿಂಗಳಿನಿಂದಲೇ ಅಯ್ಯಪ್ಪ ಮಾಲೆ ಧರಿಸಿ ರಾಜ್ಯದ ಲಕ್ಷಾಂತರ ಭಕ್ತಾದಿಗಳು ಶಬರಿಮಲೆಗೆ ತೀರ್ಥಯಾತ್ರೆ ಹೋಗುವುದರಿಂದ ಸದರಿ ಭಕ್ತಾದಿಗಳಿಗೆ ವಿಶ್ರಾಂತಿ ಪಡೆಯಲು ಸೂಕ್ತ ವ್ಯವಸ್ಥೆ, ಉಚಿತ ವೈದ್ಯಕೀಯ ವ್ಯವಸ್ಥೆ, ಆಹಾರ ವ್ಯವಸ್ಥೆ ಕನ್ನಡದಲ್ಲಿ ಸಹಾಯವಾಣಿ ಹಾಗೂ ಭಕ್ತಾದಿಗಳ ವಾಹನಕ್ಕೆ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲು ಕೇರಳ ಸರ್ಕಾರದೊಂದಿಗೆ ಈ ಬಗ್ಗೆ ಕೂಡಲೇ ಚರ್ಚಿಸಿ ಸೂಕ್ತ ಕ್ರಮವಹಿಸುವಂತೆ ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖಾ ಸಚಿವರಾದ ಶ್ರೀ ರಾಮಲಿಂಗ ರೆಡ್ಡಿಯವರಿಗೆ ಕರ್ನಾಟಕ ವಿಧಾನ ಪರಿಷತ್ತಿನ ಶಾಸಕರಾದ ಕಿಶೋರ್‌ ಕುಮಾರ್‌ ಪುತ್ತೂರು ರವರು ಪತ್ರ ಬರೆದು ಕೋರಿರುತ್ತಾರೆ.

Leave a Reply

Your email address will not be published. Required fields are marked *