ಕಡಬ: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಇವರ ಆಶ್ರಯದಲ್ಲಿ ಕಡಬ ತಾಲೂಕ ಮಟ್ಟದ 69ನೇ ವರ್ಷದ ಕನ್ನಡ ರಾಜ್ಯೋತ್ಸವ ತಾಲೂಕು ಆಡಳಿತ ಕಡಬದಲ್ಲಿ ನಡೆಯಿತು. ಧ್ವಜಾರೋಹಣವನ್ನು ಶ್ರೀ ಪ್ರಭಾಕರ ಖಜೂರೆ ಕಡಬ ತಾಲೂಕು ನೆರವೇರಿಸಿದರು ಕಡಬ ಪೊಲೀಸ್ ಠಾಣಾಧಿಕಾರಿ ಅಭಿನಂದನ್ ನೇತೃತ್ವದಲ್ಲಿ ಕಡಬ ಪೋಲಿಸರಿಂದ ಧ್ವಜ ವಂದನೆ ನಡೆಯಿತು. ಧ್ವಜಾರೋಹಣದ ನಂತರ ಸ್ಕೌಟ್ ಗೈಡ್ ಮಕ್ಕಳು ವಿವಿಧ ಶಾಲಾ ವಿದ್ಯಾರ್ಥಿಗಳು ಬ್ಯಾಂಡ್ ವಾದ್ಯ ತಂಡಗಳೊಂದಿಗೆ ಕಡಬ ಪೇಟೆಯಲ್ಲಿ ಮೆರವಣಿಗೆ ನಡಿಯಿತು.
ಬಲಿಕ ಕಡಬ ಎಪಿಎಂಸಿ ಪ್ರಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕಡಬ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಮತ್ತು ಕನ್ನಡ ಗೀತೆಗಳನ್ನು ಹಾಡಿದರು ಕಾರ್ಯಕ್ರಮದ ಉದ್ಘಾಟನೆಯನ್ನು ಕಡಬ ಪಟ್ಟಣ ಪಂಚಾಯತ್ ಅಧ್ಯಕ್ಷೆ ತಮನ್ನಾ ಜಬಿನ್ ದೀಪ ಬೆಳಗಿಸಿ ನೆರವೇರಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಪ್ರಧಾನ ಭಾಷಣಕಾರರಾದ ಜನಾರ್ದನ ಗೌಡ ಪಣೆ ಮಜಲು ಅವರು ಕನ್ನಡ ಭಾಷೆಗೆ ಸುಮಾರು 200 ವರ್ಷಗಳ ಇತಿಹಾಸ ಇದೆ ಕನ್ನಡ ಭಾಷೆಯ ಇನ್ನಷ್ಟು ಮಹತ್ವ ಅದರ ಉಳಿವಿನ ಆಗತ್ಯೆ ಬಗ್ಗೆ ಸಂದೇಶ ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಸತೀಶ್ ಭಟ್ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಡಾಕ್ಟರ್ ತ್ರಿಮೂರ್ತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಕಳೆದ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಸಾಲುಹೊದಿಸಿ ಸನ್ಮಾನಿಸಲಾಯಿತು. ಸಾರ್ವಜನಿಕರ ಪರವಾಗಿ ಆನಂದ ಮಿತ್ತ ಬೈಲು ಮಾತಾಡಿದರು.
ಮುಖ್ಯ ಅತಿಥಿಗಳಾಗಿ ಹರೀಶ್ ಕುಮಾರ್ ಇಂಜಾಡಿ ಅಧ್ಯಕ್ಷರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಹಾಜಿ ಕೆ ಎಂ ಹನೀಫ್ ಸ್ಥಾಯಿ ಸಮಿತಿ ಪಟ್ಟಣ ಪಂಚಾಯತ್ ಕಡಬ. ಶ್ರೀಮತಿ ನೀಲಾವತಿ ಶಿವರಾಮ್ ಉಪಾಧ್ಯಕ್ಷರು ಪಟ್ಟಣ ಪಂಚಾಯತ್ ಕಡಬ, ಮಾಜಿ ಜಿಲ್ಲಾ ಪರಿಷತ್ ಸದಸ್ಯ ಸೈಯದ್ ಮೀರಾ ಸಾಹೇಬ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದ್ದರು.

ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಲೀಲಾವತಿ ರಾಜಕೀಯ ಮುಖಂಡರಾದ ಪಿಪಿ ವರ್ಗಿಸ್ ಯುವಜನ ಒಕ್ಕೂಟದ ಅಧ್ಯಕ್ಷ ಶಿವಪ್ರಸಾದ್ ಮೈಲೇರಿ ಪ್ರಮುಖರು ಉಪಸ್ಥಿತರಿದ್ದರು
ಉಪಟಸಿಲ್ದಾರ್ ಗೋಪಾಲ್ ಕಲ್ಲು ಗುಡ್ಡೆ ವಂದಿಸಿದರು ಉದಯಕುಮಾರ್ ಧನ್ಯವಾದ ಗೈದು ಗಣೇಶ್ ನಡುವಾಲು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು

