ಪುತ್ತೂರು : ಸುಬ್ರಹ್ಮಣ್ಯ- ಮಂಜೇಶ್ವರ ಅಂತರ ರಾಜ್ಯ ಹೆದ್ದಾರಿಯ ಸರ್ವೇ ಸಮೀಪದ ಗಡಿಪಿಲ ಬಳಿ ಹಲವು ಹಸುಗಳನ್ನು ಇಳಿಸಿ ಪಿಕಪ್ ವಾಹನದಲ್ಲಿ ಪರಾರಿಯಾದ ಘಟನೆ ಶನಿವಾರ ಮುಂಜಾನೆ ನಡೆದಿದೆ.

ಮಾರಾಟಕ್ಕೆಂದು ಕದ್ದು ತಂದಿರುವ ಗೋವುಗಳನ್ನು ಕೊಂಡಯ್ಯಲಾಗುತ್ತಿದ್ದ ಅನುಮಾನ ಇದ್ದು ಅದರಲ್ಲಿದ್ದ ಐದಾರು ಗೋವುಗಳನ್ನು ಗಡಿಪಿಲ ಬಳಿ ನಡು ರಸ್ತೆಯಲ್ಲಿ ಬಿಟ್ಟು ಪರಾರಿಯಾಗಿರುವ ಶಂಕೆ ಇದೆ. ಸ್ಥಳದಲ್ಲಿ ಗೋವುಗಳು ಮಾತ್ರ ಇದ್ದು, ಪಿಕಪ್ ಕಂಡುಬಂದಿಲ್ಲ. ಸ್ಥಳಕ್ಕೆ ಪುತ್ತಿಲ ಪರಿವಾರದ ಅರುಣ್ ಕುಮಾರ್ ಪುತ್ತಿಲ ಭೇಟಿ ನೀಡಿದ್ದಾರೆ.ಸೂಕ್ತ ಕ್ರಮ ಕೈಗೊಳ್ಳುವಂತೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್,ಪುತ್ತೂರು ನಗರ ಠಾಣೆಯಲ್ಲಿ ದೂರು ನೀಡಲಾಗಿದೆ.

Leave a Reply

Your email address will not be published. Required fields are marked *