ಪುತ್ತೂರು : ನಗರದ ದರ್ಬೆ ಗಣೇಶ ಕಾಂಪ್ಲೆಕ್ಸ್ ನಲ್ಲಿರುವ ಇ ಎನ್ ಟಿ ಕ್ಲಿನಿಕ್ ನ ಸಿಬ್ಬಂದಿಯ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿ, ಕ್ಲಿನಿಕ್ ನ ಪೀಠೋಪಕರಣಗಳಿಗೆ ಹಾನಿ ಉಂಟುಮಾಡಿದ ಘಟನೆ ಶನಿವಾರ ಬೆಳಿಗ್ಗೆ ಸಂಭವಿಸಿದೆ.




ಖ್ಯಾತ ವೈದ್ಯ ಡಾ. ರಾಮ್ ಮೋಹನ್ ನೇತೃತ್ವದ ಕ್ಲಿನಿಕ್ ಇದಾಗಿದೆ.ದಿನಂಪ್ರತಿ ನೂರಾರು ಮಂದಿ ಚಿಕಿತ್ಸೆಗೆ ಇಲ್ಲಿಗೆ ಬರುತ್ತಿದ್ದು, ಮುಂಜಾನೆ ಆರು ಗಂಟೆಯಿಂದಲೇ ಕ್ಲಿನಿಕ್ ಗೆ ಬಂದು ಟೋಕನ್ ಪಡೆಯುತ್ತಿದ್ದರು. ಶನಿವಾರ ಬೆಳಗ್ಗೆ 6:30 ರ ಹೊತ್ತಿಗೆ ಕ್ಲೀನಿಕ್ ಹೊರಬಾಗದ ರಸ್ತೆಯ ಇಕ್ಕೆಲಗಳಲ್ಲಿ ಪಾರ್ಕಿಂಗ್ ಶುಲ್ಕ ಸಂಗ್ರಹಿಸುವ ವ್ಯಕ್ತಿ ಓರ್ವ ಬಂದು ಆತನ ಪರಿಚಯಸ್ತರನ್ನು ವೈದ್ಯರ ಬಳಿ ಬೇಗ ಕಳುಹಿಸದೆ ಇದ್ದುದನ್ನು ಪ್ರಶ್ನಿಸಿದ್ದಾನೆ.
ನಂಬರ್ ಪ್ರಕಾರ ಕಳುಹಿಸುವುದಾಗಿ ಸಿಬ್ಬಂದಿ ಹೇಳಿದ್ದು,ಇದಕ್ಕೆ ವ್ಯಕ್ತಿಯೂ ದಾಂಧಳೆ ಎಬ್ಬಿಸಿದ್ದಲ್ಲದೆ,ಸಿಬ್ಬಂದಿ ಶ್ರೀಕಾಂತನ ಮೇಲೆ ಹಲ್ಲೆ ನಡೆಸಿದ್ದಾನೆ. ಕ್ಲಿನಿಕ್ ನ ಸ್ವತ್ತುಗಳ ಮೇಲೆ ಹಾನಿ ಮಾಡಿದ್ದಾನೆ. ನಗರದ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಗಾಯಾಲು ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದಾನೆ.ಘಟನಾ ಸ್ಥಳಕ್ಕೆ ಪುತ್ತಿಲ ಪರಿವಾರದ ಅರುಣ್ ಕುಮಾರ್ ಪುತ್ತಿಲ ಭೇಟಿ ನೀಡಿ, ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಿದ್ದಾರೆ.



