ಪುತ್ತೂರು ತಾಲ್ಲೂಕಿನ ನರಿಮೊಗರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದೀನ್ ದಯಾಳ್ ಅಂತ್ಯೋದಯ ಯೋಜನೆ–ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (DAY-NRLM) ಸಂಜೀವಿನಿ ಕೆಎಸ್‌ಆರ್‌ಎಲ್‌ಪಿಎಸ್ ಅಡಿಯಲ್ಲಿ ಮಹಿಳಾ ಕಿಸಾನ್ ಸಶಕ್ತೀಕರಣ ಪರಿಯೋಜನೆ–ಸಮಗ್ರ ಕೃಷಿ ಸಮೂಹದ ಮೂಲಕ ಪರಿಶಿಷ್ಟ ಜಾತಿ ರೈತರಿಗೆ ಹಣ್ಣಿನ ಗಿಡಗಳ ವಿತರಣೆ ಕಾರ್ಯಕ್ರಮವನ್ನು ಭವ್ಯವಾಗಿ ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮವನ್ನು ಭಾರತೀಯ ಕೃಷಿ ಅಭಿವೃದ್ಧಿ ಪರಿಷತ್ತು–ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಬೆಂಗಳೂರು, ಐಸಿಎಆರ್–ಕೃಷಿ ವಿಜ್ಞಾನ ಕೇಂದ್ರ ಮಂಗಳೂರು, ಹಾಗೂ ಅನುಷ್ಠಾನ ಸಂಸ್ಥೆಯಾದ ಶ್ರೀ ದುರ್ಗಾ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಸಹಭಾಗಿತ್ವದಲ್ಲಿ, ಪುಡ್ ಚೈನ್ ಕ್ಯಾಂಪೇನ್ ಸ್ಥಾಪಕರಾದ ಯತೀಶ್ ತುಕಾರಾಂ ಅವರ ಸಹಕಾರದಿಂದ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಕೆ.ವಿ.ಕೆ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಟಿ.ಜೆ. ರಮೇಶ್ ಅವರು ಹಣ್ಣಿನ ಗಿಡಗಳ ಮಹತ್ವ ಹಾಗೂ ಸಮಗ್ರ ಕೃಷಿ ವಿಧಾನಗಳ ಕುರಿತು ರೈತರಿಗೆ ತರಬೇತಿ ನೀಡಿದರು.
ತದನಂತರ ಪುತ್ತೂರು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಶಿವಪ್ರಕಾಶ್ ಅವರು ತೋಟಗಾರಿಕಾ ಬೆಳೆಗಳು ಮತ್ತು ಇಲಾಖೆಯ ಯೋಜನೆಗಳ ಬಗ್ಗೆ ಮಾರ್ಗದರ್ಶನ ನೀಡಿದರು.

ಡೇ-ಎನ್‌ಆರ್‌ಎಲ್‌ಎಮ್ ಯೋಜನೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಜಗತ್ ಕೆ ಅವರು ಜೀವನೋಪಾಯ ಸೇವಾ ಕೇಂದ್ರಗಳ ಮೂಲಕ ರೈತರಿಗೆ ನೀಡಲಾಗುವ ತರಬೇತಿ ಮತ್ತು ಚಟುವಟಿಕೆಗಳ ಕುರಿತು ಮಾಹಿತಿ ಹಂಚಿಕೊಂಡರು.

ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದ್ದ ನರಿಮೊಗರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಉಮೇಶ್ ಅವರು ಸ್ಥಳೀಯ ಮಟ್ಟದಲ್ಲಿ ಕೃಷಿ ಮಾಡುವ ಮೂಲಕ ಉತ್ತಮ ಆದಾಯ ಗಳಿಸುವುದು ಮತ್ತು ಮಾರುಕಟ್ಟೆ ವ್ಯವಸ್ಥೆಯ ಕಲ್ಪನೆ ರೈತರ ಅಭಿವೃದ್ಧಿಗೆ ಮುಖ್ಯ ಎಂದರು.
ಶ್ರೀಮತಿ ಪೂರ್ಣಿಮಾ, ಅಧ್ಯಕ್ಷರು – ಶ್ರೀ ದುರ್ಗಾ ಸಂಜೀವಿನಿ ಒಕ್ಕೂಟ (ರಿ.), ಮೋಹನ್ ಕೆರುಟಗಿ, ಬ್ಲಾಕ್ ಮ್ಯಾನೇಜರ್, ಕೃಷಿ ಚಟುವಟಿಕೆ ವೇದಿಕೆ ಸೇರಿ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನರಿಮೊಗರು, ಮುಂಡೂರು, ಕೊಳ್ತಿಗೆ, ಕೆದಂಬಾಡಿ ಮತ್ತು ಒಳಮೊಗ್ರು ಕೃಷಿ ಸಖಿಗಳ ಮೂಲಕ ಸಮಗ್ರ ಕೃಷಿ (IFC) ಘಟಕದಲ್ಲಿ ಸೇರಿದ್ದ 70 ರೈತರಿಗೆ ಮಾವು, ನೇರಳೆ, ಲಿಂಬೆ, ಹುಣಸೆ ಸೇರಿದಂತೆ ವಿವಿಧ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು.

ಕಾರ್ಯಕ್ರಮವನ್ನು ಅನುರಾಧಾ ಪ್ರಭು ನಿರೂಪಿಸಿದರು. ಭಾರತಿ ಕಾರ್ಯಕ್ರಮಕ್ಕೆ ಪ್ರಾರ್ಥನೆ ಮಾಡಿ ವಂದಿಸಿದರು. ಸೌಮ್ಯ, ಪಶುಸಖಿ, ಕಾರ್ಯಕ್ರಮದ ನಿರ್ವಹಣೆಗೆ ನೆರವಾದರು.

Leave a Reply

Your email address will not be published. Required fields are marked *