ಪೆರ್ನೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ ಒಕ್ಕೂಟದ ಪದಾಧಿಕಾರಿಗಳಿಂದ ಬಡ ಕುಟುಂಬಕ್ಕೆ ತುರ್ತು ಧನಸಹಾಯ ಕಾರ್ಯಕ್ರಮ ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಪೆರ್ನೆ ವಲಯದ ಅರ್ಬಿ ಎಂಬಲ್ಲಿ ಅಸಹಾಯಕ ಪರಿಸ್ಥಿತಿಯಲ್ಲಿರುವ ಬಾಲಕೃಷ್ಣ ಗೌಡ ಮತ್ತು ತಿಮ್ಮಕ್ಕ ದಂಪತಿಗಳ ಕುಟುಂಬಕ್ಕೆ ಪೆರ್ನೆ ಬಿ ಒಕ್ಕೂಟದ ಪದಾಧಿಕಾರಿಗಳು ತುರ್ತು ಧನಸಹಾಯ ಮಾಡಿದರು. ಈ ಸಂದರ್ಭದಲ್ಲಿ ವಸಂತ ಶೆಟ್ಟಿ ಮಣೆವು ನಳಿನಿ ಕಳೆಂಜ, ಯಶೋದಾ ಇರುಬೈಲು ಉಪಸ್ಥಿತರಿದ್ದರು.







