ಭಾರತದಲ್ಲಿ ಚಿನ್ನದ ಬೆಲೆ ಕಳೆದ ಕೆಲವು ತಿಂಗಳಿಂದ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದೆ. ವಿಶೇಷವೆಂದರೆ ಇಳಿಕೆ ಪ್ರಮಾಣಕ್ಕೆ ಹೋಲಿಸಿದ್ರೆ ಏರಿಕೆ ಪ್ರಮಾಣವೇ ಹೆಚ್ಚು. ಕಳೆದ ವರ್ಷ 5 ಸಾವಿರದಲ್ಲಿದ್ದ ಚಿನ್ನದ ಬೆಲೆ ಇಂದು ಒಂದು ಗ್ರಾಂಗೆ 13 ಸಾವಿರ ತಲುಪಿದೆ. ಹಾಗಿದ್ರೆ ಇಂದು ಭಾರತದಲ್ಲಿ ಚಿನ್ನದ ಬೆಲೆ ಎಷ್ಟಿದೆ ಗೊತ್ತಾ?

ಭಾರತದಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?

24 ಕ್ಯಾರಟ್‌ ಚಿನ್ನದ 1 ಗ್ರಾಂ ಬೆಲೆಯಲ್ಲಿ ಇಂದು ಇಳಿಕೆಯಾಗಿದೆ. ಬೆಲೆ ಏರಿಕೆಯಿಂದ ನಿರಾಸೆಯಲ್ಲಿದ್ದ ಜನರು ಇಂದು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ. ಅಂದರೆ ಒಂದು ಗ್ರಾಂ ಚಿನ್ನದ ಬೆಲೆ ಇಂದು 13,020 ರೂ. ಆಗಿದ್ದು, ನಿನ್ನೆ 13,048 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹28 ರೂ. ಇಳಿಕೆ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,04,160 ರೂ. ಆಗಿದ್ದು, ನಿನ್ನೆ 1,04,384 ರೂ. ಇತ್ತು. ನಿನ್ನೆಗಿಂತ ಇಂದು ಚಿನ್ನದ ಬೆಲೆ ₹224 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,30,200 ರೂ. ಆಗಿದ್ದು, ನಿನ್ನೆ 1,30,480 ರೂ. ಇತ್ತು. ನಿನ್ನೆಗಿಂತ ಇಂದು ₹280 ರೂ. ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು ₹13,02,000 ರೂ. ಆಗಿದ್ದು, ನಿನ್ನೆ 13,04,800 ರೂ. ಇತ್ತು. ನಿನ್ನೆಗಿಂತ ಇಂದು 2,800 ರೂ. ಇಳಿಕೆ ಕಂಡಿದೆ.

ಭಾರತದಲ್ಲಿ 22K ಚಿನ್ನದ ಬೆಲೆ ಎಷ್ಟಿದೆ?

ಒಂದು ಗ್ರಾಂ ಚಿನ್ನದ ಬೆಲೆ ಇಂದು ಇಳಿಕೆಯಾಗಿದ್ದು, ಒಂದು ಗ್ರಾಂ ಚಿನ್ನದ ಬೆಲೆ 11,935 ರೂ. ಆಗಿದೆ. ಅಂದರೆ ನಿನ್ನೆಗೆ ಹೋಲಿಸಿದ್ರೆ ಇಂದು ₹25 ರೂ. ಇಳಿಕೆಯಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 95,480 ರೂ. ಆಗಿದ್ದು, ನಿನ್ನೆ 95,680 ರೂ. ಇತ್ತು. ನಿನ್ನೆಗಿಂತ ಇಂದು ₹200 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,19,350 ರೂ ಆಗಿದ್ದು, ನಿನ್ನೆ 1,19,600 ರೂ. ಇತ್ತು. ನಿನ್ನೆಗಿಂತ ಇಂದು ₹250 ರೂ. ಇಳಿಕೆ ಕಂಡಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 11,93,500 ರೂ. ಆಗಿದ್ದು, ನಿನ್ನೆ 11,96,000 ರೂ. ಇತ್ತು. ಇಂದು ಒಟ್ಟು 2,500 ರೂ. ಇಳಿಕೆಯಾಗಿದೆ.

ಭಾರತದಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?

18 ಕ್ಯಾರಟ್‌ ಚಿನ್ನದ 1 ಗ್ರಾಂ ಚಿನ್ನದ ಬೆಲೆ ಇಂದು ₹9,765 ರೂ. ಆಗಿದ್ದು, ನಿನ್ನೆ 9,786 ರೂ. ಆಗಿತ್ತು. ಅಂದರೆ ನಿನ್ನೆಗಿಂತ ಇಂದು 21 ರೂ. ವ್ಯತ್ಯಾಸವಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು ₹78,120 ರೂ. ಆಗಿದ್ದು, ನಿನ್ನೆ 78,288 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 168 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 97,650 ರೂ. ಆಗಿದ್ದು, ನಿನ್ನೆ 97,860 ರೂ. ಇತ್ತು. ಒಟ್ಟು 210 ರೂ. ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 9,76,500 ರೂ. ಆಗಿದ್ದು, ನಿನ್ನೆ 9,78,600 ರೂ. ಆಗಿತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಒಟ್ಟು 1,200 ರೂ. ಇಳಿಕೆ ಕಂಡಿದೆ.

ಭಾರತದ ವಿವಿಧ ನಗರಗಳ ಚಿನ್ನದ ಬೆಲೆ ಇಂದು ಹೇಗಿದೆ?

ಚೆನ್ನೈ: 24K ರೂ. 12,135, 22K ರೂ. 11,040, 18K ರೂ. 9,040

ಮುಂಬೈ: 24K ರೂ. 12,020, 22K ರೂ. 11,935, 18K ರೂ. 9,765

ದೆಹಲಿ: 24K ರೂ. 12,035, 22K ರೂ. 11,950, 18K ರೂ. 9,780

ಕೋಲ್ಕತ್ತಾ: 24K ರೂ. 12,020, 22K ರೂ. 11,935, 18K ರೂ. 9,765

ಬೆಂಗಳೂರು: 24K ರೂ. 12,020, 22K ರೂ. 11,935, 18K ರೂ. 9,765

ಹೈದರಾಬಾದ್: 24K ರೂ. 12,020, 22K ರೂ. 11,935, 18K ರೂ. 9,765

ಕೇರಳ: 24K ರೂ. 12,020, 22K ರೂ. 11,935, 18K ರೂ. 9,765

ಪುಣೆ: 24K ರೂ. 12,020, 22K ರೂ. 11,935, 18K ರೂ. 9,765

ವಡೋದರಾ: 24K ರೂ. 12,025, 22K ರೂ. 11,940, 18K ರೂ. 9,770

ಅಹಮದಾಬಾದ್: 24K ರೂ. 12,025, 22K ರೂ. 11,940, 18K ರೂ. 9,770

ಇಂದಿನ ಬೆಳ್ಳಿ ಬೆಲೆ:

ಬೆಳ್ಳಿ ಬೆಲೆ ಈ ಬಾರಿ ದಾಖಲೆ ಬೆಲೆಯಲ್ಲಿ ಏರಿಕೆ ಕಂಡಿದೆ. ಇಂದು ಬೆಳ್ಳಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸಗಳಾಗಿಲ್ಲ. ಇಂದು 1 ಗ್ರಾಂ ಬೆಳ್ಳಿ ದರ ₹188 ರೂ. ಆಗಿದ್ದು, ನಿನ್ನೆಯೂ ₹188 ರೂ. ಇತ್ತು. ಇನ್ನು 8 ಗ್ರಾಂ ಬೆಳ್ಳಿ ದರ ಇಂದು ₹1,504, 10 ಗ್ರಾಂ ಬೆಳ್ಳಿ ₹1,880 ರೂ., 100 ಗ್ರಾಂ ಬೆಳ್ಳಿ ದರ ₹18,800 ರೂ., 1000 ಗ್ರಾಂ ಬೆಳ್ಳಿ ದರ ₹1,88,000 ರೂ. ಆಗಿದೆ.

ಸ್ಪಾಟ್‌ ಗೋಲ್ಡ್‌ ವಿವರ:

ಡಿಸೆಂಬರ್‌ 2ರ ರಾಯಿಟರ್ಸ್‌ ವರದಿಯ ಪ್ರಕಾರ, ಆರು ವಾರಗಳ ಗರಿಷ್ಠ ಮಟ್ಟದ ವಹಿವಾಟು ನಡೆಸಿದ ನಂತರ, ಮಂಗಳವಾರ ಚಿನ್ನದ ಬೆಲೆಯಲ್ಲಿ ಸ್ವಲ್ಪ ಕುಸಿತವಾಗಿದೆ. ಹೂಡಿಕೆದಾರರು ಫೆಡ್‌ ದರ ಕಡಿತದ ನಿರೀಕ್ಷೆಯಲ್ಲಿದ್ದಾರೆ. ಅಲ್ಲದೇ ಯುಎಸ್‌ ಆರ್ಥಿಕ ವರದಿಗಾಗಿ ಕಾಯುತ್ತಿದ್ದಾರೆ.

ಅಕ್ಟೋಬರ್‌ 21ರ ಸೋಮವಾರದ ನಂತರ ಅತ್ಯುನ್ನತ ಮಟ್ಟದಲ್ಲಿ ಏರಿಕೆ ಕಂಡ ನಂತರ, ಸ್ಪಾಟ್‌ ಚಿನ್ನದ ದರವು 0436 GMT ವೇಳೆಗೆ ಪ್ರತೀ ಔನ್ಸ್‌ ಚಿನ್ನಕ್ಕೆ 0.4% ಕುಸಿದು $4,216.13 ಕ್ಕೆ ತಲುಪಿದೆ.

Leave a Reply

Your email address will not be published. Required fields are marked *