ಮಂಗಳೂರು : ಸುಳ್ಯದ ಪೆರಾಜೆ-ನಿಡ್ಯಮಲೆ ರಸ್ತೆಯಲ್ಲಿ ಪಾನತ್ತಿಲದ ಬದಿಯಲ್ಲಿ ಕಡವೆಯ ಮೃತದೇಹವೊಂದು ಪತ್ತೆಯಾಗಿದೆ.

ನವೆಂಬರ್ 27ರ ರಾತ್ರಿ ಬೇಟೆಗಾರರು ಕಡವೆಗೆ ಗುಂಡು ಹಾರಿಸಿದ್ದಾರೆ. ಇದರಿಂದ ಅದು ರಸ್ತೆ ಬದಿ ಬಂದು ಬಿದ್ದಿದೆ ಎಂದು ಶಂಕಿಸಲಾಗಿದೆ.

ಸಂಪಾಜೆ ಅರಣ್ಯ ಇಲಾಖೆಯ ಅಧಿಕಾರಿಗಳು ಸತ್ತ ಕಡವೆಯನ್ನು ವಶಕ್ಕೆ ಪಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಹಲವರನ್ನು ವಿಚಾರಣೆ ನಡೆಸಿದ್ದಾರೆ.

ರಸ್ತೆಯ ಬದಿಯಲ್ಲಿ ಕಡವೆ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ಅರಣ್ಯ ಇಲಾಖೆಗೆ ಮಾಹಿತಿಯನ್ನು ನೀಡಿದ್ದರು.

Leave a Reply

Your email address will not be published. Required fields are marked *