ಪುತ್ತೂರಿನ ನೆಹರು ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಇದೇ ಡಿಸೆಂಬರ್ 4, 5 ಮತ್ತು 6, ಈ ಮೂರು ದಿನಗಳಂದು, ಅವಿಷ್ಕಾರ – 2k25′, ಅಂತರ್ ಶಾಲಾ ವಿಜ್ಞಾನ ಮೇಳ ಹಾಗೂ ಚಿಣ್ಣರ ಚಿತ್ತಾರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ (NEP) 2020, ಇದರ ಆಶಯಗಳಿಗೆ ಪೂರಕವಾಗಿ; ವಿಶೇಷವಾದ ಅನುಭವದಿಂದ ಕಲಿಯುವುದು, ದೈನಂದಿನ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯುವುದು ಮತ್ತು ಸೃಜನಶೀಲತೆಯ ಮೇಲೆ ಈ ಕಾರ್ಯಕ್ರಮಗಳು ಕೇಂದ್ರೀಕೃತವಾಗಿವೆ. ಈ ಸಂದರ್ಭದಲ್ಲಿ, 6 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ, ವಿಜ್ಞಾನ ಸೃಜನಶೀಲತೆ ಮತ್ತು ಅನ್ವೇಷಣೆಯನ್ನು ಉತ್ತೇಜಿಸುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಡಿಸೆಂಬರ್ 4ನೇ ಗುರುವಾರದಂದು, INSEF (ಇಂಡಿಯನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ಫೇರ್) ಪ್ರಾಜೆಕ್ಟ್ ಪ್ರದರ್ಶನ ನಡೆಯಲಿದೆ. ಈ ಪ್ರದರ್ಶನದ ಉದ್ಘಾಟನಾ ಸಮಾರಂಭದ ಅಧ್ಯಕ್ಷ ಸ್ಥಾನವನ್ನು, ವಿವೇಕಾನಂದ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಶ್ರೀಯುತ ಡಾ. ಕಲ್ಲಡ್ಕ ಪ್ರಭಾಕರ ಭಟ್ ಇವರು ವಹಿಸಲಿದ್ದಾರೆ. ಡಾ. ಅನಿರ್ಬನ್ ಚಕ್ರರ್ತಿ, ಡೈರೆಕ್ಟರ್, ನಿಮ್ಮ ವಿಶ್ವ ವಿದ್ಯಾನಿಲಯ, ವಿಜ್ಞಾನ ಮತ್ತು ಸಂಶೋಧನಾ ವಿಭಾಗ ಇವರು ಮುಖ್ಯ ಅತಿಥಿಗಳಾಗಿರುವರು ಹಾಗೂ ಶ್ರೀ ನಾರಾಯಣ ಐಯ್ಯರ್, ಅಧ್ಯಕ್ಷರು, ಸೈನ್ಸ್ ಸೊಸೈಟಿ, ಇಂಡಿಯ ಇವರ ಗೌರವ ಉಪಸ್ಥಿತಿ ಇರಲಿರುವುದು. ಈ ದಿನದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಅಜೆಯ ಪಡಿವಾಳ್‌, ಆಡಳಿತ ಮಂಡಳಿ ಸದಸ್ಯರು, ವಿವೇಕಾನಂದ ಸೆಂಟ್ರಲ್ ಸ್ಕೂಲ್ ಇವರು ವಹಿಸಲಿದ್ದಾರೆ ಮತ್ತು ಮುಖ್ಯ ಅತಿಥಿಗಳಾಗಿ ಡಾ. ಗುರುರಾಜ ಎಂ. ಪಿ. ಪ್ರಾಂಶುಪಾಲರು, ವಿವೇಕಾನಂದ ಇನ್ಸಿಟ್ಯೂಟ್ ಆಫ್ ಫಾರ್ಮಾಸೂಟಿಕಲ್ ಸೈನ್ಸಸ್ ಇವರು ಆಗಮಿಸಲಿದ್ದಾರೆ.

ಡಿಸೆಂಬರ್ 5ನೇ ಶುಕ್ರವಾರದಂದು, TIFR (ಟಾಟಾ ಇನ್ಸಿಟ್ಯೂಟ್ ಆಫ್ ಫಂಡಮೆಂಟಲ್ ಅಂಡ್ ರಿಸರ್ಚ್, ಮುಂಬೈಯ ಖ್ಯಾತ ವಿಜ್ಞಾನಿಗಳು ಸಂಸ್ಥೆಗೆ ಆಗಮಿಸಿ, ವಿಜ್ಞಾನದ ಮೂಲತತ್ತ್ವಗಳು ಹಾಗೂ ಅದರ ಪರಿಕಲ್ಪನೆಯನ್ನು ಮಕ್ಕಳಿಗೆ ಸರಳ ಪ್ರಾತ್ಯಕ್ಷಿಕೆಗಳ ಮೂಲಕ ವಿವರಿಸಿ, ಕಲಿಕೆಯನ್ನು ಸರಳವಾಗಿಸುವ ಉತ್ತಮ ವಿಧಾನಗಳನ್ನು ತಿಳಿಸಿಕೊಡಲಿದ್ದಾರೆ. ಮಾತ್ರವಲ್ಲದೆ, ಈ ಸಮಯದಲ್ಲಿ ವಿದ್ಯಾರ್ಥಿಗಳೊಡನೆ ಸಂವಾದವನ್ನು ಏರ್ಪಡಿಸಲಾಗಿದೆ. ಪ್ರತಿ ಶಾಲೆಯಿಂದ ಗರಿಷ್ಠ 40 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ಇದು ವಿದ್ಯಾರ್ಥಿಗಳಿಗೆ ಒಂದು ಉತ್ತಮ ಅವಕಾಶವಾಗಿದೆ. ಇದೇ ದಿನ, 6ರಿಂದ 8ನೇ ತರಗತಿ ಮತ್ತು 9ರಿಂದ 10ನೇ ತರಗತಿ, ಈ ಎರಡು ವಿಭಾಗಗಳಲ್ಲಿ, ಅವಿಷ್ಕಾರ ಅಂತರ್ ಶಾಲಾ ವಿವಿಧ ಸ್ಪರ್ಧೆಗಳು ನಡೆಯಲಿವೆ. ಇದರ ಉದ್ಘಾಟನಾ ಸಮಾರಂಭವು, ಡಾ. ಕೆ.ಎಂ. ಕೃಷ್ಣ ಭಟ್, ಕಾರ್ಯದರ್ಶಿಗಳು, ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು ಇವರ ಅಧ್ಯಕ್ಷತೆಯಲ್ಲಿ ಮತ್ತು ಶ್ರೀಮತಿ ವಸಂತಿ ಕೆ ಅಧ್ಯಕ್ಷರು, ವಿವೇಕಾನಂದ ಸೆಂಟ್ರಲ್ ಸ್ಕೂಲ್ ಇವರ ಗೌರವ ಉಪಸ್ಥಿತಿಯಲ್ಲಿ ನೆರವೇರಲಿದೆ.

ಮುಖ್ಯ ಅತಿಥಿಗಳಾಗಿ ಶ್ರೀ ಉಲ್ಲಾಸ್ ಎಂ.ವಿ. ವೈದ್ಯ , ಸೈಂಟಿಫಿಕ್ ಆಫೀಸರ್ , TIFR ಮುಂಬೈ ಇವರು ಆಗಮಿಸಲಿರುವರು. ಈ ದಿನದ ಬಹುಮಾನ ವಿತರಣಾ ಕಾರ್ಯಕ್ರಮವು ಶ್ರೀ ಭರತ್ ಪೈ, ಸಂಚಾಲಕರು, ವಿವೇಕಾನಂದ ಸೆಂಟ್ರಲ್ ಸ್ಕೂಲ್ ಇವರ ಅಧ್ಯಕ್ಷತೆಯಲ್ಲಿ ಮತ್ತು ಶ್ರೀಮತಿ ಸಿಂಧು ವಿ.ಜಿ., ಪ್ರಾಂಶುಪಾಲರು, ಇವರ ಗೌರವ ಉಪಸ್ಥಿತಿಯಲ್ಲಿ ಜರುಗಲಿದೆ. ಮುಖ್ಯ ಅತಿಥಿಗಳಾಗಿ ಶ್ರೀ ಸುಹಾಸ್ ಎ. ಪಿ. ಎಸ್., ಪ್ರೊಪ್ರೈಟರ್, ಮರಿಕೆ ಸಾವಯವ ಮಳಿಗೆ, ಪುತ್ತೂರು ಇವರು ಆಗಮಿಸಲಿದ್ದಾರೆ. ಡಿಸೆಂಬರ್ 6ನೇ ಶನಿವಾರದಂದು, ಆವಿಷ್ಕಾರ 2k25 ಇದರ ಅಡಿಯಲ್ಲಿ ಚಿಣ್ಣರ ಚಿತ್ತಾರ ವನ್ನು ಹಮ್ಮಿಕೊಳ್ಳಲಾಗಿದ್ದು, ಮೂರರಿಂದ ಆರು ವರ್ಷದ ಮಕ್ಕಳಿಗೆ ವಿವಿಧ ಮೋಜಿನ ಆಟಗಳು, ಸ್ಪರ್ಧೆಗಳು ಹಾಗೂ ಪ್ರತಿಭಾ ಪ್ರದರ್ಶನವನ್ನು ಆಯೋಜಿಸಲಾಗಿದೆ. ಈ ಚಿಣ್ಣರ ಚಿತ್ತಾರ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷ ಸ್ಥಾನವನ್ನು ಶ್ರೀಮತಿ ಶಂಕರಿ ಶರ್ಮ, ಆಡಳಿತ ಮಂಡಳಿ ಸದಸ್ಯರು, ವಿವೇಕಾನಂದ ಸೆಂಟ್ರಲ್ ಸ್ಕೂಲ್ ಇವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀಮತಿ ಶ್ರೀದೇವಿ ನಾಗರಾಜ್ ಭಟ್, ಕಾರ್ಯದರ್ಶಿಗಳು, ಶ್ರೀ ಕೇಶವ ಕೃಪ ವೇದ ಯೋಗ ಕಲಾ ಪ್ರತಿಷ್ಠಾನ, ಸುಳ್ಯ ಇವರು ಆಗಮಿಸಲಿದ್ದಾರೆ. ಇದೇ ದಿನ ಸಂಜೆ ನಡೆಯುವ ಚಿಣ್ಣರ ಸಾಧನಾ ಸನ್ಮಾನದಲ್ಲಿ ಶ್ರೀಮತಿ ಪ್ರೀತಿ ಶೆಣೈ, ಆಡಳಿತ ಮಂಡಳಿ ಸದಸ್ಯರು, ಅಧ್ಯಕ್ಷತೆ ವಹಿಸಲಿರುವರು. ಶ್ರೀಮತಿ ಲಕ್ಷ್ಮಿ ವಿ.ಜಿ. ಭಟ್, ಅಧ್ಯಕ್ಷರು, ನಿವೇದಿತ ಶಿಶು ಮಂದಿರ, ಪುತ್ತೂರು ಇವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ಎಲ್ಲಾ ದಿನಗಳಂದು, ಶಾಲಾ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು ಮತ್ತು ಪ್ರಾಂಶುಪಾಲರು ಉಪಸಿ ತರಿರುವರು. ವಿಶೇಷ ಆಕರ್ಷಣೆಯಾಗಿ ಡಿಸೆಂಬರ್ 5 ಮತ್ತು 6ರಂದು ತಾರಾಲಯ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಇದರ ಪ್ರವೇಶವು ಸಂಪೂರ್ಣವಾಗಿ ಉಚಿತವಾಗಿದೆ. ಪ್ರತಿ ದಿನ 8 ಪ್ರದರ್ಶನಗಳು ನಡೆಯಲಿದ್ದು, ಪ್ರತಿ ಪ್ರದರ್ಶನದಲ್ಲಿ ಸುಮಾರು 60 ಮಕ್ಕಳು ತಾರಾಲಯ ವೀಕ್ಷಣೆ ಮಾಡಬಹುದಾಗಿದೆ. ಈ ಮೂರೂ ದಿನಗಳ. ಕಾರ್ಯಕ್ರಮಗಳು ಬೆಳಗ್ಗೆ 9:30 ರಿಂದ ಸಂಜೆ 4:30ರ ವರೆಗೆ ನಡೆಯಲಿರುವುದು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕರ ಪ್ರಮಾಣಪತ್ರವನ್ನು ನೀಡುವುದರ ಜೊತೆಗೆ, ಮಕ್ಕಳಿಗೆ ಉಚಿತವಾಗಿ ಊಟೋಪಚಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಳ್ಳಬೇಕಾಗಿ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *