ಪುತ್ತೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಪುತ್ತೂರಿನ ದ್ವಾರಕಾ ಹೋಟೇಲ್ ಸಭಾಂಗಣದಲ್ಲಿ ಡಿಸೆಂಬರ್ 7ರಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 69ನೇ ಪರಿನಿಭಣ ದಿನಾಚರಣೆ ನಡೆಯಲಿದೆ ಎಂದು ಸಮಿತಿಯ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಸುಣ್ಣಾಜೆ ತಿಳಿಸಿದ್ದಾರೆ.

ಗುರುವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ದಸಂಸ ಹಿರಿಯ ಸಂಚಾಲಕರಾದ ವಾಸುದೇವ ಸಾಮೆತ್ತಡ್ಕ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು. ಪತ್ರಕರ್ತ ಸಂಶುದ್ದೀನ್ ಸಂಪ್ಯ ಮತ್ತು ಗಣೇಶ್ ಕಾರೆಕ್ಕಾಡು ಸೇರಿದಂತೆ ಗಣ್ಯರು ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕೃಷ್ಣಪ್ಪ ಸುಣ್ಣಾಜೆ ಅವರು ಮುಂದುವರೆದು ಮಾತನಾಡುತ್ತಾ, ದಲಿತ ಸಂಘರ್ಷ ಸಮಿತಿಯ ತತ್ವಸಿದ್ಧಾಂತಗಳನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಅಂಬೇಡ್ಕರ್ ಹಾಗೂ ಪ್ರೊ. ಬಿ. ಕೃಷ್ಣಪ್ಪ ಅವರ ಕನಸುಗಳನ್ನು ಸಾಕಾರಗೊಳಿಸುವ ಚಿಂತನೆ ಇದರ ಮೂಲವೆಂದರು. ಈ ಹಿನ್ನೆಲೆಯಲ್ಲಿ ಪುತ್ತೂರು ತಾಲೂಕು ಮಟ್ಟದ ಸಂಘಟನೆಗಳನ್ನು ಮರುವ್ಯವಸ್ಥೆಗೊಳಿಸಲಾಗಿದೆ ಎಂದು ತಿಳಿಸಿದರು.

ಹೊಸ ಸಂಘಟನೆ ನೇಮಕಾತಿಗಳು:

ತಾಲೂಕು ಸಂಚಾಲಕರು: ಸುಂದರ್ ನಿಧಿಮುಂಡ

ಸಂಘಟನಾ ಸಂಚಾಲಕರು: ಗುರುವ ಬಿ.ಎ. ನಿಡ್ಪಳ್ಳಿ, ಶ್ರೀನಿವಾಸ ಭರಣ್ಯ, ವಸಂತ ಶಾಂತಿಗೋಡು, ಪ್ರವೀಣ್ ಪಾಪೆಮಜಲು

ಕೋಶಾಧಿಕಾರಿ: ಮಾಧವ ಸರ್ವೆ

ಗೌರವ ಸಲಹೆಗಾರರು: ಗಣೇಶ್ ಕಾರೆಕ್ಕಾಡು, ಕೆ.ಕೆ. ಪೂವಪ್ಪ, ನಿಶಾಂತ್ ಶಾಂತಿಗೋಡು, ಶ್ರೀಧರ್ ನಗರ

ಪತ್ರಿಕಾಗೋಷ್ಟಿಯಲ್ಲಿ ಕೆ.ಕೆ. ಪೂವಪ್ಪ ಮತ್ತು ಸುಂದರ್ ನಿಧಿಮುಂಡ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *