ಕೆಲಿಂಜ: ರಸ್ತೆ ದಾಟುತ್ತಿದ್ದ ಹಸುವಿಗೆ ಓಮಿ ಕಾರು ಡಿಕ್ಕಿ ಹೊಡೆದು ಹಸು ಸೇರಿದಂತೆ ಇಬ್ಬರು ಗಾಯಗೊಂಡ ಘಟನೆ ಕೆಲಿಂಜದಲ್ಲಿ ನಡೆದಿದೆ.
ಕಲ್ಲಡ್ಕದಿಂದ ಬರುತ್ತಿದ್ದ ಓಮ್ಮಿ ಕಾರೊಂದು ಕೆಲಿಂಜ ಸಮೀಪಿಸುತ್ತಿದ್ದ ವೇಳೆ ರಸ್ತೆಯ ನಡುವಿನಲ್ಲಿ ದಾಟುತ್ತಿದ್ದ ಹಸುವಿಗೆ ಡಿಕ್ಕಿ ಹೊಡೆದು, ಅಪಘಾತದ ರಭಸಕ್ಕೆ ರಸ್ತೆ ಬದಿ ನಿಂತಿದ್ದ ಬ್ರೆಜ್ಞಾ ಕಾರಿಗೆ ಡಿಕ್ಕಿ ಹೊಡೆದಿದೆ.
ಪರಿಣಾಮ ಹಸು ಸೇರಿದಂತೆ ಒಮ್ಮಿಯಲ್ಲಿದ್ದ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.







