ಕಡಬ, ಡಿ. 9
ರಾಜ್ಯ ಸರ್ಕಾರ ತಂದಿರುವ ನೂತನ ಗೋ ಸಂರಕ್ಷಣಾ ತಿದ್ದುಪಡಿ ವಿಧೇಯಕವು ಗೋ ಹತ್ಯೆಗೆ ಪರೋಕ್ಷ ಪ್ರೋತ್ಸಾಹ ನೀಡುವಂತಿದೆ ಎಂದು ಆರೋಪಿಸಿರುವ ವಿಶ್ವ ಹಿಂದೂ ಪರಿಷತ್ (ವಿಹಿಂಪ) ಕಡಬ ಪ್ರಖಂಡ, ವಿಧೇಯಕದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಈ ಹಿನ್ನೆಲೆಯಲ್ಲಿ, ಡಿಸೆಂಬರ್ 9, 2025, ಮಂಗಳವಾರ ಸಂಜೆ 5 ಗಂಟೆಗೆ, ಕಡಬ ಜಂಕ್ಷನ್ (ಪಂಜ ರಸ್ತೆ)ನಲ್ಲಿ ವಿಹಿಂಪ ಗೋರಕ್ಷಾ ವಿಭಾಗದ ನೇತೃತ್ವದಲ್ಲಿ ಭಾರಿ ಪ್ರತಿಭಟನೆ ನಡೆಯಲಿದೆ.
ಸಾರ್ವಜನಿಕರು, ಭಕ್ತರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಿಹಿಂಪ ಕರೆ ನೀಡಿದೆ.







