ಗ್ರಾಮೀಣ ವಿದ್ಯಾರ್ಥಿ ಭಾರತೀಯ ವಾಯುಸೇನೆಗೆ ಆಯ್ಕೆ**

ಪುತ್ತೂರು:
ಉಪ್ಪಿನಂಗಡಿ ಹಿರೆಬಂಡಾಡಿ ಗ್ರಾಮದ ಕೀರ್ತನ್ ಕೆ.ಪಿ ಅವರು ಪ್ರತಿಷ್ಠಿತ ವಿದ್ಯಾಮಾತಾ ಅಕಾಡೆಮಿಯಲ್ಲಿ ಪಡೆದ ತರಬೇತಿಯಿಂದ ಭಾರತೀಯ ವಾಯುಸೇನೆಯ ನೇಮಕಾತಿ ಪ್ರಕ್ರಿಯೆಯಲ್ಲಿ ಉತ್ತೀರ್ಣರಾಗಿ ಆಯ್ಕೆ ಪಡೆಯುವ ಮೂಲಕ ಸಂಸ್ಥೆಗೆ ಮತ್ತೊಂದು ಗೌರವ ತಂದುಕೊಟ್ಟಿದ್ದಾರೆ.

ಸಶಸ್ತ್ರ ಪಡೆಗಳ ನೇಮಕಾತಿಗಳಿಗೆ ಅಭ್ಯರ್ಥಿಗಳನ್ನು ತಯಾರಿಸುವಲ್ಲಿ ವಿದ್ಯಾಮಾತಾ ಅಕಾಡೆಮಿ ಸಾಧಿಸಿರುವ ಯಶಸ್ವೀ ಪಯಣಕ್ಕೆ ಕೀರ್ತನ್ ಅವರ ಸಾಧನೆ ಮತ್ತೊಂದು ಹೆಮ್ಮೆಯ ಅಧ್ಯಾಯವಾಗಿದೆ.

ನಿರಂತರ ಪರಿಶ್ರಮ ಮತ್ತು ಕ್ರಮಬದ್ಧ ತರಬೇತಿಯ ಫಲವಾಗಿ ಕೀರ್ತನ್ ಕೆ.ಪಿ ಅವರು
ಭಾರತೀಯ ವಾಯುಸೇನೆಯ ನೇಮಕಾತಿಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ.

ಇದೇ ಸಂದರ್ಭದಲ್ಲಿ, ಅವರು ಭಾರತೀಯ ಸೇನೆಯ ಅಗ್ನಿಪಥ್ ನೇಮಕಾತಿಯ ಲಿಖಿತ ಪರೀಕ್ಷೆಯಲ್ಲೂ ಉತ್ತೀರ್ಣರಾಗಿ, ಮುಂದಿನ ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಅರ್ಹತೆ ಪಡೆದುಕೊಂಡಿದ್ದಾರೆ ಎಂಬುದೂ ಗಮನಾರ್ಹ.

ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಹಿರೆಬಂಡಾಡಿಯ
ಕಂದಲಾಜೆ ನಿವಾಸಿಗಳಾದ ಪದ್ಮಯ್ಯ ಗೌಡ ಮತ್ತು ಪுஷ್ಪಲತಾ ದಂಪತಿಗಳ ಪುತ್ರರಾದ ಕೀರ್ತನ್, ಗ್ರಾಮೀಣ ಪರಿಸರದಲ್ಲಿಯೇ ಬೆಳೆದಿದ್ದರೂ ಪರಿಶ್ರಮ ಮತ್ತು ಗುರಿಯ ಚುರುಕಿನಿಂದ ರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದ್ದಾರೆ.

ಕೀರ್ತನ್ ಅವರ ಸಾಧನೆ ಕುರಿತು ಸಂಸ್ಥೆಯ ಆಡಳಿತ ನಿರ್ದೇಶಕರು ಮಾತನಾಡಿ,
“ಕೀರ್ತನ್ ರವರ ಸಾಧನೆ ಮತ್ತಷ್ಟು ವಿದ್ಯಾರ್ಥಿಗಳು ರಕ್ಷಣಾ ಪಡೆಗಳಲ್ಲಿ ಸೇವೆ ಸಲ್ಲಿಸುವ ಕನಸನ್ನು ನನಸು ಮಾಡಲು ಪ್ರೇರಣೆ ನೀಡುತ್ತದೆ. ಇದು ವಿದ್ಯಾಮಾತಾ ಅಕಾಡೆಮಿಯ ತರಬೇತಿ ಗುಣಮಟ್ಟಕ್ಕೆ ಲಭಿಸಿದ ಮಹತ್ತರ ಮಾನ್ಯತೆ” ಎಂದು ಸಂತಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *