ಪುತ್ತೂರು: ನೆಹರು ನಗರದಲ್ಲಿರುವ ಪಡ್ಡಯೂರು ನಿವಾಸಿ ಹಾಗೂ ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತ ದಾಮೋದರ ನೆಲಪಾಲ್ ಅವರು ಇಂದು ಬೆಳಗ್ಗೆ ಅಕಾಲಿಕವಾಗಿ ನಿಧನ ಹೊಂದಿದ್ದಾರೆ. ತೋಟದಲ್ಲಿ ಕೆಲಸ ಮಾಡುತ್ತಿರುವ ವೇಳೆ ತೀವ್ರ ಅಸ್ವಸ್ಥರಾಗಿ ಅಚಾನಕ ಕುಸಿದು ಬಿದ್ದ ಪರಿಣಾಮ ಸಾವನ್ನಪ್ಪಿದರೆಂದು ತಿಳಿದುಬಂದಿದೆ.




ಕಾಂಗ್ರೆಸ್ ಪಕ್ಷದ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ದಾಮೋದರ ನೆಲಪಾಲ್ ಅವರ ನಿಧನ ಸ್ಥಳೀಯರಿಗೆ ಆಘಾತ ತಂದಿದೆ. ಮೃತರು ಕುಟುಂಬಸ್ಥರು ಮತ್ತು ಅಪಾರ ಬಂಧು–ಮಿತ್ರರನ್ನು ಅಗಲಿದ್ದಾರೆ.



