ಭದ್ರ – ಟೆಕ್ ವಿಂಡೋಸ್ & ಡೋರ್ರ್ಸ್ ನಿಂತಿಕಲ್ಲು ಇದರ ಸಹ ಸಂಸ್ಥೆಯು ಡಿ. 12 ರಂದು ಪಂಜದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉತ್ಕರ್ಷ ಸೌಧದಲ್ಲಿ ಶುಭಾರಂಭಗೊಂಡಿತು.
ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ ದೀಪ ಬೆಳಗಿಸಿ, ಉದ್ಘಾಟಿಸಿದರು.
ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್ ಶುಭ ಹಾರೈಸಿದರು.

ಭದ್ರ- ಟೆಕ್ ವಿಂಡೋಸ್ & ಡೋರ್ರ್ಸ್ ಇದರ ಮಾಲೀಕರಾದ ದಯಾನಂದ ಮೇಲ್ಮನೆ ಪ್ರಾಸ್ತಾವಿಕವಾಗಿ ಮಾತನಾಡಿ “ ವೈಶಿಷ್ಟ್ಯಪೂರ್ಣ ತಂತ್ರಜ್ಞಾನದೊಂದಿಗೆ ಉನ್ನತ ಗುಣಮಟ್ಟ ಮತ್ತು ದೀರ್ಘಾವಧಿ ಬಾಳಿಕೆಗೆ ಹೆಸರು ವಾಸಿಯಾದ ಏಕೈಕ ತಯಾರಿಕಾ ಘಟಕ ನಮ್ಮದು. ನಮ್ಮ ಮಾತೃ ಸಂಸ್ಥೆ ನಿಂತಿಕಲ್ಲಿನಲ್ಲಿದೆ “. ಎಂದು ವಿವರಿಸಿದರು.




ಕಾರ್ಯಕ್ರಮದಲ್ಲಿ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ,ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾರಾಯಣ ಕೃಷ್ಣನಗರ, ಸದಸ್ಯರಾದ ಚಂದ್ರಶೇಖರ ದೇರಾಜೆ, ಲಿಖಿತ್ ಪಲ್ಲೋಡಿ, ಕಿರಣ್ ಕಂರ್ಬು ನೆಕ್ಕಿಲ, ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಹಿತೇಶ್ ಪಂಜದಬೈಲು, ಲೋಕೇಶ್ ಬರೆಮೇಲು,ನ್ಯಾಯವಾದಿ ಶಂಕರ್ ಭಟ್, ಕರ್ನಾಟಕ ಯುವಕ ಮಂಡಲದ ಕಾರ್ಯಧರ್ಶಿ ಅಶೋಕ್ ಕೋಡಿ, ಹರೀಶ್ ಕರಿಮಜಲು, ದಾಸಪ್ಪ ಗೌಡ ಮೇಲ್ಮನೆ, ಶ್ರೀಮತಿ ಭುವನೇಶ್ವರಿ ದಯಾನಂದ ಮೇಲ್ಮನೆ, ವಿದ್ಯಾನಂದ ಮೇಲ್ಮನೆ, ಸಂಸ್ಥೆಯ ಸಿಬ್ಬಂದಿಗಳು, ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ನಿತ್ಯಾನಂದ ಮೇಲ್ಮನೆ ಸ್ವಾಗತಿಸಿ, ದಯಾನಂದ ಮೇಲ್ಮನೆ ವಂದಿಸಿದರು.




