ಪುತ್ತೂರು: ಧನುಸಕ್ರಮಣದ ಮರುದಿನದಿಂದ ಆರಂಭವಾಗಿ ಉತ್ತರಾಯನ ಪುಣ್ಯಕಾಲವಾದ ಮಕರ ಸಂಕ್ರಮಣದವರೆಗೆ ನಡೆಯುವ ಧನುರ್ಮಾಸದ ಮೊದಲ ಪೂಜೆ ಇತಿಹಾಸ ಪ್ರಸಿದ್ಧ ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡಿಸೆಂಬರ್ 16ರಂದು ಬೆಳಗ್ಗೆ ಪ್ರಾತಃಕಾಲ 5.30ಕ್ಕೆ ಭಕ್ತಿಭಾವದಿಂದ ನೆರವೇರಿತು.

ಧನುರ್ಮಾಸದ ಮೊದಲ ದಿನವೇ ದೇವಾಲಯದಲ್ಲಿ ಅಪಾರ ಸಂಖ್ಯೆಯ ಭಕ್ತರು ಸೇರಿದ್ದು, ಪ್ರಾತಃಕಾಲದಲ್ಲೇ ದೇವಳ ಭಕ್ತ ಸಾಗರದಿಂದ ತುಳುಕಿತು. ಭಕ್ತರು ವಿಶೇಷ ಪೂಜೆ, ಸೇವೆಗಳಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.

ಧನುರ್ಮಾಸದ ಅವಧಿಯಲ್ಲಿ ಪ್ರತಿದಿನವೂ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆಯಿದೆ.

Leave a Reply

Your email address will not be published. Required fields are marked *