ಕಡಬ: ಕಡಬದ ಖ್ಯಾತ ಕಲಾ–ಸಾಂಸ್ಕೃತಿಕ ಕ್ಷೇತ್ರದ ಸೇವಕ ಶ್ರೀನಿವಾಸ್ ರೈ ಅವರಿಗೆ ಏಷ್ಯಾ ಇಂಟರ್‌ನ್ಯಾಷನಲ್ ಕಲ್ಚರ್ ಅಕಾಡೆಮಿ (Asia International Culture Research University) ವತಿಯಿಂದ ಗೌರವ ಡಾಕ್ಟರೇಟ್ (Honorary Doctorate Award) ಪ್ರದಾನಿಸಲಾಗುತ್ತಿದೆ.

ಶ್ರೀನಿವಾಸ್ ರೈ ಅವರು ಸಲ್ಲಿಸಿದ್ದ ಅರ್ಜಿ ಹಾಗೂ ಅವರ ಸಾಮಾಜಿಕ, ಕಲಾ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿನ ಸಾಧನೆಗಳನ್ನು ಪರಿಶೀಲಿಸಿದ ಬಳಿಕ, ಅಕಾಡೆಮಿಯ ಆಡಳಿತ ಮಂಡಳಿ ಈ ಗೌರವ ಪ್ರಶಸ್ತಿಯನ್ನು ನೀಡಲು ತೀರ್ಮಾನಿಸಿದೆ. ಕಲೆ ಮತ್ತು ಸಂಸ್ಕೃತಿ (Art and Cultural) ವಿಭಾಗದಲ್ಲಿ ಈ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಡಿಸೆಂಬರ್ 27, 2025 ರಂದು ಹೋಸೂರು (ತಮಿಳುನಾಡು) ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನಿಸಲಾಗುವುದು ಎಂದು ತಿಳಿಸಲಾಗಿದೆ.




ಈ ಗೌರವ ಪ್ರಶಸ್ತಿ ಕಡಬ ತಾಲೂಕಿಗೆ ಹೆಮ್ಮೆಯ ವಿಷಯವಾಗಿದ್ದು, ಶ್ರೀನಿವಾಸ್ ರೈ ಅವರ ಸಾಧನೆಗೆ ವಿವಿಧ ಸಂಘ–ಸಂಸ್ಥೆಗಳು ಹಾಗೂ ಸಾರ್ವಜನಿಕ ವಲಯದಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.




