ವಿಟ್ಲ: ಸಾರ್ವಜನಿಕರಿಗೆ ಸುಸಜ್ಜಿತ ವೈದ್ಯಕೀಯ ಸೇವೆ ನೀಡುವ ನಿಟ್ಟಿನಲ್ಲಿ ವಿಟ್ಲದ ಚಂದಳಿಕೆ ಸಮೀಪದ ಕಲ್ಲಕಟ್ಟದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ‘ರಕ್ಷಾ ಕ್ಲಿನಿಕ್’ ಡಿಸೆಂಬರ್ 22ರಂದು ಉದ್ಘಾಟನೆಗೊಳ್ಳಲಿದೆ. ಕಲ್ಲಕಟ್ಟದ ಶ್ರೀ ಮಂಜುನಾಥ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸಲಿರುವ ಈ ಕ್ಲಿನಿಕ್ ಅನ್ನು ಡಿ.22ರಂದು ಬೆಳಿಗ್ಗೆ 11:30ಕ್ಕೆ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠಾಧೀಶರಾದ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಲಿದ್ದಾರೆ.
ಕ್ಲಿನಿಕ್ನ ವಿಶೇಷತೆಗಳು ಮತ್ತು ಸೌಲಭ್ಯಗಳು:
ರೋಗಿಗಳ ಅನುಕೂಲಕ್ಕಾಗಿ ಈ ಕ್ಲಿನಿಕ್ನಲ್ಲಿ ಅಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಅಳವಡಿಸಲಾಗಿದ್ದು, ಈ ಕೆಳಗಿನ ಸೇವೆಗಳು ಲಭ್ಯವಿರಲಿವೆ:




24 ಗಂಟೆ ತಜ್ಞ ವೈದ್ಯರ ಲಭ್ಯತೆ: ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆ ನೀಡಲು ದಿನದ 24 ಗಂಟೆಯೂ ತಜ್ಞ ವೈದ್ಯರು ಲಭ್ಯವಿರುತ್ತಾರೆ.
ಒಳರೋಗಿ ಸೌಲಭ್ಯ: ಅವಶ್ಯಕತೆ ಇರುವವರಿಗೆ ಬೆಡ್ ಸೌಲಭ್ಯ ಮತ್ತು ಡ್ರಿಪ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ತಪಾಸಣಾ ಸೌಲಭ್ಯ: ಇಸಿಜಿ, ಎಕ್ಸ್-ರೇ (X-Ray), ಆಕ್ಸಿಜನ್ ಮತ್ತು ನೆಬಲೈಸೇಶನ್ ಸೌಲಭ್ಯಗಳು ಇಲ್ಲಿ ಲಭ್ಯವಿವೆ.
ಆಧುನಿಕ ಪ್ರಯೋಗಾಲಯ: ರಕ್ತ ಪರೀಕ್ಷೆ ಸೇರಿದಂತೆ ಬಯೋಕೆಮಿಸ್ಟ್ರಿ, ಲಿವರ್ ಫಂಕ್ಷನ್ ಟೆಸ್ಟ್ (LFT) ಹಾಗೂ ಥೈರಾಯ್ಡ್ ಪರೀಕ್ಷೆಗಳನ್ನು ನಡೆಸಲು ಸುಸಜ್ಜಿತ ಲ್ಯಾಬ್ ವ್ಯವಸ್ಥೆಯಿದ್ದು 24 ಗಂಟೆಯೂ ಕಾರ್ಯನಿರ್ವಹಿಸಲಿದೆ.


ಹೆಲ್ತ್ ಪ್ಯಾಕೇಜ್: ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ವಿವಿಧ ಹೆಲ್ತ್ ಪ್ಯಾಕೇಜ್ ಸೌಲಭ್ಯಗಳನ್ನು ಕ್ಲಿನಿಕ್ ವತಿಯಿಂದ ನೀಡಲಾಗುತ್ತಿದೆ.
ವಿಟ್ಲ ಮತ್ತು ಸುತ್ತಮುತ್ತಲಿನ ಪರಿಸರದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಗುರಿಯೊಂದಿಗೆ ಈ ಕ್ಲಿನಿಕ್ ಆರಂಭವಾಗುತ್ತಿದ್ದು, ಉದ್ಘಾಟನಾ ಸಮಾರಂಭಕ್ಕೆ ಎಲ್ಲರಿಗೂ ಆತ್ಮೀಯ ಆಹ್ವಾನ ನೀಡಲಾಗಿದೆ.


