ಸುಳ್ಯ, ಏಪ್ರಿಲ್:
ವೀರಾಂಜನೇಯ ಸ್ಪೋರ್ಟ್ಸ್ ಕ್ಲಬ್ (ರಿ.), ಗುತ್ತಿಗಾರು – ಸುಳ್ಯ ತಾಲೂಕು ಇವರ ಆಶ್ರಯದಲ್ಲಿ, ರಾಷ್ಟ್ರೀಯ ಕ್ರೀಡಾಪಟು ಹಾಗೂ ವೀರಾಂಜನೇಯ ಸ್ಪೋರ್ಟ್ಸ್ ಕ್ಲಬ್ ಗುತ್ತಿಗಾರು ಸ್ಥಾಪಕಾಧ್ಯಕ್ಷರಾದ ಶ್ರೀ ಮಾಯಿಲಪ್ಪ ಗೌಡ ಕೊಂಬೆಟ್ಟು ಅವರ ನೇತೃತ್ವದಲ್ಲಿ ಅದ್ದೂರಿಯಾಗಿ 4ನೇ ವರ್ಷದ ‘ಸೂರ್ಯ ಬೆಳಕಿನ ವೀರಾಂಜನೇಯ ಟ್ರೋಫಿ–2026’ ಮ್ಯಾಟ್ ಕಬಡ್ಡಿ ಪಂದ್ಯಾಟ ಆಯೋಜಿಸಲಾಗಿದೆ.

ಈ ಪಂದ್ಯಾಟವು ಏಪ್ರಿಲ್ 3, 4 ಹಾಗೂ 5 ರಂದು ಮೂರು ದಿನಗಳ ಕಾಲ ಗುತ್ತಿಗಾರು ಗ್ರಾಮ ಪಂಚಾಯತ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪಂದ್ಯಾಟದಲ್ಲಿ ಪ್ರಾಥಮಿಕ ಶಾಲಾ ಬಾಲಕರ, 8ನೇ ತರಗತಿ ಬಾಲಕರ, ಫ್ರೌಢಶಾಲಾ ಬಾಲಕರ ಹಾಗೂ ಪುರುಷರ 65 ಕೆ.ಜಿ. ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ.

ಪ್ರಾಥಮಿಕ, 8ನೇ ತರಗತಿ ಹಾಗೂ ಫ್ರೌಢಶಾಲಾ ಬಾಲಕರ ವಿಭಾಗಗಳಲ್ಲಿ

ಪ್ರಥಮ ಬಹುಮಾನ: ರೂ. 5,000 ಮತ್ತು ಟ್ರೋಫಿ

ದ್ವಿತೀಯ ಬಹುಮಾನ: ರೂ. 3,000 ಮತ್ತು ಟ್ರೋಫಿ

ಸೆಮಿಫೈನಲ್‌ಗೆ ನಿರ್ಗಮಿತ ತಂಡಗಳಿಗೆ ತಲಾ ರೂ. 1,000 ಮತ್ತು ಟ್ರೋಫಿ

ವೈಯಕ್ತಿಕ ಬಹುಮಾನಗಳಿಗೆ ನಗದು ಮತ್ತು ಟ್ರೋಫಿ ನೀಡಲಾಗುವುದು.

ಪುರುಷರ 65 ಕೆ.ಜಿ. ವಿಭಾಗದಲ್ಲಿ

ಪ್ರಥಮ ಬಹುಮಾನ: ರೂ. 10,000 ಮತ್ತು ಟ್ರೋಫಿ

ದ್ವಿತೀಯ ಬಹುಮಾನ: ರೂ. 7,000 ಮತ್ತು ಟ್ರೋಫಿ

ಸೆಮಿಫೈನಲ್‌ಗೆ ನಿರ್ಗಮಿತ ತಂಡಗಳಿಗೆ ತಲಾ ರೂ. 4,000 ಮತ್ತು ಟ್ರೋಫಿ

ವೈಯಕ್ತಿಕ ಬಹುಮಾನಗಳಿಗೆ ನಗದು ಮತ್ತು ಟ್ರೋಫಿ ಸೇರಿದಂತೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದೆಂದು ಆಯೋಜಕರು ತಿಳಿಸಿದ್ದಾರೆ.

ಕ್ರೀಡಾ ಪ್ರತಿಭೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಿರುವ ಈ ಪಂದ್ಯಾಟದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು:
ಮಾಯಿಲಪ್ಪ ಕೊಂಬೆಟ್ಟು – 6363663899
ಮೋಹನ್ ಶಿರಾಜೆ – 9483831086
ನಿರಂತ್ ದೇವಶ್ಯ – 8431127832

Leave a Reply

Your email address will not be published. Required fields are marked *