ಪುತ್ತೂರು:
ಇತ್ತೀಚಿನ ದಿನಗಳಲ್ಲಿ ಥಲಸ್ಸೆಮಿಯಾ ಎಂಬ ಮಾರಕ ರಕ್ತ ಸಂಬಂಧಿತ ಕಾಯಿಲೆಗೆ ಅನೇಕ ಮಕ್ಕಳು ತುತ್ತಾಗುತ್ತಿರುವ ಹಿನ್ನೆಲೆಯಲ್ಲಿ, ಈ ಕಾಯಿಲೆಗೆ ಹೊಸ ಮಾದರಿಯ ಚಿಕಿತ್ಸೆಯಾಗಿರುವ ನಾವೆಲ್ ಥೆರಪಿಗೆ ಕೇಂದ್ರ ಸರ್ಕಾರದ ಅನುಮೋದನೆ ಹಾಗೂ ಆರ್ಥಿಕ ಸಹಾಯ ನೀಡುವಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಸಲ್ಲಿಸಲಾಗಿದೆ.

ಡಿಸೆಂಬರ್ 20ರಂದು ವಿನಯ್ ಮಣಿಯಾಣ ಅವರು ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿಯಾಗಿ ಈ ಕುರಿತು ಮನವಿ ಸಲ್ಲಿಸಿದರು. ಮನವಿಯಲ್ಲಿ, ನಾವೆಲ್ ಥೆರಪಿ ಚಿಕಿತ್ಸಾ ವಿಧಾನಕ್ಕೆ ಕೇಂದ್ರ ಸರ್ಕಾರದ ಮಾನ್ಯತೆ ದೊರೆತಲ್ಲಿ, ಈ ಚಿಕಿತ್ಸೆ ದೇಶದಾದ್ಯಂತ ಸಾರ್ವಜನಿಕರಿಗೆ ಕೈಗೆಟಕುವ ದರದಲ್ಲಿ ಲಭ್ಯವಾಗಲು ಸಾಧ್ಯವಾಗುತ್ತದೆ ಎಂದು ವಿವರಿಸಿದರು.

ನಾವೆಲ್ ಥೆರಪಿ ಅನುಷ್ಠಾನಗೊಂಡಲ್ಲಿ ಥಲಸ್ಸೆಮಿಯಾ ಸೇರಿದಂತೆ ವಿವಿಧ ರಕ್ತ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಮತ್ತು ರೋಗಿಗಳಿಗೆ ಅತ್ಯಂತ ಸಹಾಯಕವಾಗಲಿದೆ ಎಂದು ಅವರು ಮನವಿಯಲ್ಲಿ ತಿಳಿಸಿದರು.

ಈ ಕುರಿತು ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.

Leave a Reply

Your email address will not be published. Required fields are marked *