ಸುಳ್ಯ: ಗೂನಡ್ಕ ಬಳಿ ನಿಂತಿದ್ದ ಮಾರುತಿ ಓಮ್ಮಿ ಕಾರಿಗೆ ಗುದ್ದಿ ಲಾರಿ ಪಲ್ಟಿಯಾಗಿ ಚಾಲಕ ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಪೈಪ್‌ಗಳನ್ನು ಸಾಗಿಸುತ್ತಿದ್ದ ಲಾರಿ ಮಡಿಕೇರಿಯಿಂದ ಸುಳ್ಯ ಕಡೆಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಗೂನಡ್ಕ ಬಳಿ, ಸುಳ್ಯದಿಂದ ಕಲ್ಲಗುಂಡಿ ಕಡೆಗೆ ಹೋಗುತ್ತಿದ್ದ ಓಮ್ಮಿ ಕಾರಿಗೆ ಲಾರಿ ಡಿಕ್ಕಿ ಹೊಡೆದಿದ್ದು, ನಂತರ ಲಾರಿ ಪಲ್ಟಿಯಾಗಿದೆ.

ಓಮಿ ಕಾರು ಲಾರಿ ಅಡಿಯಲ್ಲಿ ಸಿಲುಕಿಕೊಂಡಿತ್ತು. ಆದರೆ, ಅಪಘಾತದ ಸಮಯದಲ್ಲಿ ಕಾರು ಚಾಲಕ ಹತ್ತಿರದ ಅಂಗಡಿಯಲ್ಲಿ ನಿಂತಿದ್ದರಿಂದ ಯಾವುದೇ ಪ್ರಾಣಾಪಾಯ ಆಗದೇ ಪಾರಾಗಿದ್ದಾರೆ.

ಉರುಳಿಬಿದ್ದ ಲಾರಿಯನ್ನು ಜೆಸಿಬಿ ಬಳಸಿ ಮೇಲಕ್ಕೆತ್ತಲಾಯಿತು. ಲಾರಿ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಶಿವಮೊಗ್ಗ ಮೂಲದವರು ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *