ಪಂಜ:
ಪಂಜ ಹವ್ಯಕ ವಲಯದ ಯುವ ಘಟಕದ ನೇತೃತ್ವದಲ್ಲಿ, ರೋಟರಿ–ಕ್ಯಾಂಪ್ಕೋ ಬ್ಲಡ್ ಸೆಂಟರ್ ಪುತ್ತೂರು, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಪಂಜ ಗ್ರಾಮ ಪಂಚಾಯತ್, ಆಟೋ ಚಾಲಕ ಮಾಲಕರ ಸಂಘ ಪಂಜ ಹಾಗೂ ಚಿಗುರು ಗೆಳೆಯರ ಬಳಗ ಪಂಬೆತ್ತಾಡಿ ಇವರ ಸಹಯೋಗದಲ್ಲಿ ಡಿಸೆಂಬರ್ 21ರಂದು ಆದಿತ್ಯವಾರ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು.




ಶಿಬಿರವು ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಹವ್ಯಕ ಮಹಾಮಂಡಲದ ಅಧ್ಯಕ್ಷ ಶ್ರೀ ಹರಿಪ್ರಸಾದ ಪೆರಿಯಪ್ಪು ಅವರು ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಪಂಜ ಹವ್ಯಕ ವಲಯದ ಅಧ್ಯಕ್ಷೆ ಶ್ರೀಮತಿ ಮೂಕಾಂಬಿಕಾ ಭೀಮಗುಳಿ ಅವರು ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ಉಪ್ಪಿನಂಗಡಿ ಹವ್ಯಕ ಮಂಡಲದ ಅಧ್ಯಕ್ಷ ಶ್ರೀ ಅರವಿಂದ ದರ್ಬೆ, ಪಂಜ ಸಿ.ಎ ಬ್ಯಾಂಕ್ ಅಧ್ಯಕ್ಷ ಶ್ರೀ ಚಂದ್ರಶೇಖರ ಶಾಸ್ತ್ರೀ, ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ, ಚಿಗುರು ಗೆಳೆಯರ ಬಳಗ ಪಂಬೆತ್ತಾಡಿ ಅಧ್ಯಕ್ಷ ಅಶ್ವಥ್, ಪಂಜ ಹವ್ಯಕ ವಲಯದ ಯುವ ಪ್ರಧಾನ ಕೃಷ್ಣ ಎಂ.ಆರ್ ಕಡಬ ಹಾಗೂ ರೋಟರಿ–ಕ್ಯಾಂಪ್ಕೋ ಬ್ಲಡ್ ಸೆಂಟರ್ ಪುತ್ತೂರು ವೈದ್ಯಾಧಿಕಾರಿ ಡಾ. ರಾಮಚಂದ್ರ ಭಟ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪಂಜ ಹವ್ಯಕ ವಲಯದ ಪದಾಧಿಕಾರಿಗಳು, ಯುವಕರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿಗಳು ಭಾಗವಹಿಸಿದ್ದು, ಶಿಬಿರದಲ್ಲಿ ಒಟ್ಟು 57 ಯೂನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ.
ರಕ್ತದಾನದ ಮಹತ್ವವನ್ನು ವಿವರಿಸಿದ ಅತಿಥಿಗಳು, ಸಮಾಜದ ಅಗತ್ಯಕ್ಕೆ ಸ್ಪಂದಿಸುವ ಇಂತಹ ಸೇವಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕೆಂದು ಅಭಿಪ್ರಾಯಪಟ್ಟರು.


