ಪುತ್ತೂರು: ಭಾರತೀಯ ಜನತಾ ಪಾರ್ಟಿಯ ಧೀಮಂತ ನಾಯಕ, ದೇಶ ಕಂಡ ಶ್ರೇಷ್ಠ ಪ್ರಧಾನಿ ಹಾಗೂ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮದಿನವನ್ನು ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಹಾಗೂ ನಗರ ಮಂಡಲ ಬಿಜೆಪಿ ವತಿಯಿಂದ ಪುತ್ತೂರು ಬಿಜೆಪಿ ಕಚೇರಿಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಅಟಲ್ ಜೀ ಅವರ ಆದರ್ಶಮಯ ಜೀವನ, ದೃಢ ನಾಯಕತ್ವ ಮತ್ತು ರಾಷ್ಟ್ರ ನಿರ್ಮಾಣಕ್ಕೆ ನೀಡಿದ ಅಮೂಲ್ಯ ಕೊಡುಗೆಗಳನ್ನು ಸ್ಮರಿಸಿದರು. ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಅವರು ಅಟಲ್ ಜೀ ಜನ್ಮದಿನದ ಅಂಗವಾಗಿ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾದ ವಿವಿಧ ಕಾರ್ಯಕ್ರಮಗಳ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ವಿದ್ಯಾಗೌರಿ, ಮಂಡಲ ಪ್ರಧಾನ ಕಾರ್ಯದರ್ಶಿ ಸುನಿಲ್ ದಡ್ಡು, ಲೋಕೇಶ್ ಚಾಕೋಟೆ, ಮಂಡಲ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್, ನಾಗೇಶ್ ಟಿ.ಎಸ್. ಕೆಮ್ಮಾಯಿ, ವಿರೂಪಾಕ್ಷ ಭಟ್ ಮಚ್ಚಿಮಲೆ, ಮಂಡಲ ಕಾರ್ಯದರ್ಶಿ ಪುನೀತ್ ಮಾಡತ್ತಾರು, ನಗರ ಮಂಡಲ ಕಾರ್ಯದರ್ಶಿ ಯುವರಾಜ ಪೆರ್ಯತ್ತೋಡಿ, ಸುರೇಶ್ ಅತ್ರಮಜಲು, ರಾಜೇಶ್ ಬನ್ನೂರು, ವಿಶ್ವನಾಥ ಕುಲಾಲ್, ಮಹಿಳಾ ಮೋರ್ಚಾದ ಅಧ್ಯಕ್ಷೆ ಸ್ವರ್ಣಲತಾ ಹೆಗ್ಡೆ, ಉಷಾ ಮುಳಿಯ, ಜಯಲಕ್ಷ್ಮೀ ಶಗ್ರಿತ್ತಾಯ, ಚಿತ್ರಪ್ರಸಾದ್ ರೈ ಅಂಕೊತ್ತಿಮಾರು, ಆಶಾ ಭಗವಾನ್, ವಿಮಲಾ ಪಡ್ಡಾಯೂರು, ನಾಗೇಂದ್ರ ಬಾಳಿಗ, ನಿರಂಜನ್ ಮಾನ್ಯ, ಶ್ರೀಧರ ಪಟ್ಲ, ಮಹೇಶ್ ರೈ ಕೇರಿ, ಕಿರಣ್ ಮಲ್ಯ, ಸುರೇಶ್ ರೈ, ದಯಾನಂದ ಗೌಡ ಕೆಮ್ಮಾಯಿ, ತಿಮ್ಮಪ್ಪ ಪೂಜಾರಿ ಮೂಡಾಯೂರು, ಶ್ರೀಧರ ಕುಂಜಾರು ಸೇರಿದಂತೆ ಮಂಡಲದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ನಾಗೇಶ್ ಟಿ.ಎಸ್. ಕೆಮ್ಮಾಯಿ ಸ್ವಾಗತಿಸಿ, ಸುನಿಲ್ ದಡ್ಡು ವಂದಿಸಿದರು.

Leave a Reply

Your email address will not be published. Required fields are marked *