ಪುತ್ತೂರು, ನವೆಂಬರ್ 10: ತೋಟಗಾರಿಕೆ ಇಲಾಖೆ ಜಿಲ್ಲಾ ಪಂಚಾಯತ್ ಪುತ್ತೂರು, ಕೃಷಿ ಇಲಾಖೆ ಪುತ್ತೂರು, ಕಡಬ ತಾಲೂಕು ಕೃಷಿಕ ಸಮಾಜ ಹಾಗೂ ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ.) ಕೊಟ್ರುಪಾಡಿ ಗ್ರಾಮ, ಕಡಬ ತಾಲೂಕು ಇವುಗಳ ಸಹಯೋಗದಲ್ಲಿ “ಅಡಿಕೆ ಕೃಷಿ ಸಮಗ್ರ ನಿರ್ವಹಣೆ – ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ” ನಾಳೆ (ಸೋಮವಾರ) ಬೆಳಿಗ್ಗೆ 9.30ಕ್ಕೆ ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಮೃದ್ಧಿ ಸಹಕಾರ ಸಂವಾದ ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮಕ್ಕೆ ಶ್ರೀಮತಿ ಸುಮನ, ಅಧ್ಯಕ್ಷರು, ಕುಟ್ರುಪಾಡಿ ಗ್ರಾಮ ಪಂಚಾಯತ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಶ್ರೀ ವಿಜಯಕುಮಾರ್, ಅಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಕೃಷಿಕ ಸಮಾಜ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಅತಿಥಿಗಳಾಗಿ ಶ್ರೀ ಕೃಷ್ಣಪ್ಪ ದೇವಾಡಿಗ, ಅಧ್ಯಕ್ಷರು, ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ.) ಹಾಗೂ ಶ್ರೀ ಎನ್. ರಾಜಾರಾಮ್ ಭಟ್, ಹೊಸಮಠದ ಪ್ರಗತಿಪರ ಕೃಷಿಕರು ಹಾಜರಿರಲಿದ್ದಾರೆ.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಡಾ. ರಶ್ಮಿ, ವಿಜ್ಞಾನಿಗಳು, ಕೃಷಿ ವಿಜ್ಞಾನ ಕೇಂದ್ರ (ಕೆ.ವಿ.ಕೆ.) ಮಂಗಳೂರು ಅವರು ಭಾಗವಹಿಸಿ ಅಡಿಕೆ ಬೆಳೆ ನಿರ್ವಹಣೆಯ ಕುರಿತು ಮಾರ್ಗದರ್ಶನ ನೀಡಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಅಡಿಕೆ ಬೆಳೆಗಾರರು, ಕೃಷಿಕರು ಹಾಗೂ ಸಹಕಾರಿ ಸಂಸ್ಥೆಗಳ ಸದಸ್ಯರು ಭಾಗವಹಿಸಲು ಆಯೋಜಕರು ಆಹ್ವಾನಿಸಿದ್ದಾರೆ.

ಕಾರ್ಯಕ್ರಮದ ನಂತರ ಸಹಭೋಜನದ ವ್ಯವಸ್ಥೆಯೂ ಇರಲಿದೆ.

