ಪುತ್ತೂರು : ಕೆಯ್ಯುರು ಗ್ರಾಮದ ಮಾಡಾವು ಗೌರಿ ಹೊಳೆಗೆ ಅಪರಿಚಿತರು ಪ್ರಾಣಿಯ ತ್ಯಾಜ್ಯವನ್ನು ಗೋಣಿಚೀಲದಲ್ಲಿ ಕಟ್ಟಿ ಎಸೆದಿರುವ ಘಟನೆ ವರದಿಯಾಗಿದೆ. ಸ್ಥಳೀಯರಿಂದ ಲಭಿಸಿದ ಮಾಹಿತಿಯ ಆಧಾರದಲ್ಲಿ ಕೆಯ್ಯುರು ಗ್ರಾಮ ಪಂಚಾಯತ್ ಅಧ್ಯಕ್ಷ ಶರತ್ ಕುಮಾರ್ ಮಾಡಾವು ಅವರು ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಗೌರಿ ಹೊಳೆಯ ನೀರನ್ನು ಸ್ಥಳೀಯರು ಕೃಷಿ ಚಟುವಟಿಕೆಗಳಿಗೂ ಹಾಗೂ ಕುಡಿಯುವ ನೀರಿನ ಅಗತ್ಯಕ್ಕೂ ಬಳಸುತ್ತಿದ್ದು, ಇದೇ ಹೊಳೆಯ ಸಮೀಪದಲ್ಲಿರುವ ಧಾರ್ಮಿಕ ಕೇಂದ್ರದ ಬಳಿಯೇ ಈ ರೀತಿಯ ಅಮಾನವೀಯ ಕೃತ್ಯ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ದೂರಿನಲ್ಲಿ ಆಗ್ರಹಿಸಲಾಗಿದೆ.

Leave a Reply

Your email address will not be published. Required fields are marked *