ರಾಜ್ಯ/ನವದೆಹಲಿ : ಫೆಬ್ರವರಿ 1ರಿಂದ ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಹಾಗೂ ಪಾನ್ ಮಸಾಲ ಮೇಲೆ ಹೊಸ ಸೆಸ್ ಜಾರಿಯಾಗಲಿದೆ ಎಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದರ ಪರಿಣಾಮವಾಗಿ ಸಿಗರೇಟ್, ಬೀಡಿ, ಪಾನ್ ಮಸಾಲ ಸೇರಿದಂತೆ ತಂಬಾಕು ಉತ್ಪನ್ನಗಳ ಬೆಲೆ ಹೆಚ್ಚಾಗಲಿದೆ.

ಸರ್ಕಾರದ ಅಧಿಸೂಚನೆಯ ಪ್ರಕಾರ, ತಂಬಾಕು ಮತ್ತು ಪಾನ್ ಮಸಾಲ ಮೇಲಿನ ಹೊಸ ಸುಂಕಗಳು ಜಿಎಸ್‌ಟಿ ದರಕ್ಕಿಂತ ಹೆಚ್ಚಾಗಿದ್ದು, ಪ್ರಸ್ತುತ ಸರಕುಗಳ ಮೇಲೆ ವಿಧಿಸಲಾಗುತ್ತಿದ್ದ ಪರಿಹಾರ ಸೆಸ್ ಅನ್ನು ಬದಲಾಯಿಸಲಿದೆ. ಫೆಬ್ರವರಿ 1ರಿಂದ ಪಾನ್ ಮಸಾಲ, ಸಿಗರೇಟ್, ತಂಬಾಕು ಹಾಗೂ ಇತರ ಸಮಾನ ಉತ್ಪನ್ನಗಳಿಗೆ ಶೇ. 40 ರಷ್ಟು ಜಿಎಸ್‌ಟಿ ವಿಧಿಸಲಾಗುವುದು. ಇನ್ನು ಬೀಡಿಗಳಿಗೆ ಶೇ. 18 ರಷ್ಟು ಸರಕು ಮತ್ತು ಸೇವಾ ತೆರಿಗೆ (GST) ಅನ್ವಯವಾಗಲಿದೆ.

ಹೊಸ ತೆರಿಗೆ ಮತ್ತು ಸೆಸ್ ಜಾರಿಯಿಂದ ತಂಬಾಕು ಉತ್ಪನ್ನಗಳ ಬಳಕೆ ಕಡಿಮೆಯಾಗಲಿದೆ ಎಂಬ ನಿರೀಕ್ಷೆಯನ್ನು ಸರ್ಕಾರ ವ್ಯಕ್ತಪಡಿಸಿದ್ದು, ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ಇದರಿಂದ ವ್ಯಾಪಾರ ವಲಯದಲ್ಲೂ ಬೆಲೆ ಏರಿಕೆಯ ಪರಿಣಾಮ ಕಾಣಿಸಿಕೊಳ್ಳಲಿದೆ ಎಂದು ಅಂದಾಜಿಸಲಾಗಿದೆ.

Leave a Reply

Your email address will not be published. Required fields are marked *