ಪಣೋಲಿಬೈಲು: ಜಿಲ್ಲೆಯ ಪ್ರಸಿದ್ಧ ಕ್ಷೇತ್ರವಾದ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಜನವರಿ ತಿಂಗಳಲ್ಲಿ ನಡೆಯುವ ಅಗೆಲು ಮತ್ತು ಕೋಲ ಸೇವೆಗಳ ದಿನಾಂಕಗಳನ್ನು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಿಸಿದೆ.

ಪ್ರಕಟಣೆಯಂತೆ, ಜನವರಿ ತಿಂಗಳಲ್ಲಿ ತಾ. 6, 20, 23, 25, 27 ಮತ್ತು 30 ರಂದು ಅಗೆಲು ಸೇವೆ ನಡೆಯಲಿದೆ. ಇದೇ ವೇಳೆ, ತಾ. 16, 25, 27, 28, 29 ಮತ್ತು 30 ರಂದು ಹರ್ಕೆ ಕೋಲ ಸೇವೆ ನಡೀತದೆ. ಉಳಿತ ದಿನಗಳಲ್ಲಿ ಅಗೆಲು ಸೇವೆ ಮತ್ತು ಕೋಲ ಸೇವೆ ಎರಡೂ ಇರುವುದಿಲ್ಲ ಎಂದು ತಿಳಿಸಲಾಗಿದೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸೇವೆಗಳಲ್ಲಿ ಭಾಗವಹಿಸುವಂತೆ ದೇವಾಲಯ ಸಮಿತಿ ಮನವಿ ಮಾಡಿಕೊಂಡಿದೆ.

Leave a Reply

Your email address will not be published. Required fields are marked *