ಬೆಂಗಳೂರು/ಶಿವಮೊಗ್ಗ: ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣದ ಅಪರಾಧಿ ಅರಾಫತ್‌ಗೆ (Arafat) 6 ವರ್ಷ ಜೈಲು ಶಿಕ್ಷೆ ವಿಧಿಸಿ ಎನ್‌ಐಎ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಟ್ರಯಲ್ ಬ್ಲಾಸ್ಟ್ ಕೇಸ್‌ನಲ್ಲಿ 3ನೇ ಅಪರಾಧಿಯಾಗಿದ್ದ ಅರಾಫತ್ ಅಲಿ ಆರೋಪ ಸಾಬೀತಾಗಿದ್ದು, ವಿಚಾರಣೆ ನಡೆಸಿದ ಎನ್ಐಎ ವಿಶೇಷ ಕೋರ್ಟ್ , 6 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಐಸಿಎಸ್ ಜೊತೆಗೆ ನಿರಂತರ ಸಂಪರ್ಕ, ಭಯೋತ್ಪಾದಕ ಚಟುವಟಿಕೆಗೆ ಹಣ ಮತ್ತು ಯುವಕರ ಒಟ್ಟುಗೂಡಿಸಿರೋ ಆರೋಪ ಅರಾಫತ್ ಮೇಲಿತ್ತು.ಇದೇ ಕೇಸ್‌ನಲ್ಲಿ ಈಗಾಗಲೇ ಇಬ್ಬರು ಅಪರಾಧಿಗಳಿಗೆ ತಲಾ 6 ವರ್ಷ ಶಿಕ್ಷೆ ವಿಧಿಸಲಾಗಿತ್ತು. ಈ ಪ್ರಕರಣ ಸಂಬಂಧ 12 ಜನ ಆರೋಪಿಗಳನ್ನು ಎನ್‌ಐಎ ಬಂಧಿಸಿತ್ತು. ಸದ್ಯ ಮೂವರಿಗೆ ಶಿಕ್ಷೆಯಾಗಿದ್ದು, 9 ಜನ ಆರೋಪಿಗಳ ವಿಚಾರಣೆ ಮುಂದುವರೆದಿದೆ.

Leave a Reply

Your email address will not be published. Required fields are marked *