ಪುತ್ತೂರು: ಪುತ್ತೂರಿನ ಕಬಕ ನಿವಾಸಿಯಾದ ಹಾಗೂ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲೆಯಾಗಿರುವ ಶ್ರೀಮತಿ ಅಕ್ಷತಾ ಎ.ಪಿ. ಅವರು ಪಿ.ಹೆಚ್.ಡಿ. ಪದವಿಯನ್ನು ಪಡೆದಿದ್ದಾರೆ.
‘A Critical Study on Resolution of Commercial Disputes in Real Estate Sector through ADR Mechanism’ ಎಂಬ ವಿಷಯದ ಕುರಿತು ಸಂಶೋಧನಾ ಮಹಾಪ್ರಬಂಧವನ್ನು ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ (KSLU) ಸಲ್ಲಿಸಿ ಅವರು ಈ ಪದವಿಯನ್ನು ಪಡೆದಿದ್ದಾರೆ.





ಮಂಗಳೂರಿನ ಎಸ್‌ಡಿಎಂ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ತಾರನಾಥ್ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಕಾರ್ಯವನ್ನು ಪೂರ್ಣಗೊಳಿಸಿರುವ ಡಾ. ಅಕ್ಷತಾ ಎ.ಪಿ., 2019-20ನೇ ಸಾಲಿನಿಂದ ಪುತ್ತೂರಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.


ಡಾ. ಅಕ್ಷತಾ ಎ.ಪಿ. ಅವರು ಎಸ್‌ಡಿಎಂ ಪಿಯು ಕಾಲೇಜು ಉಜಿರೆಯ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಶ್ರೀ ರಾಜೇಶ್ ಕಲ್ಬೆಟ್ಟುರವರ ಪತ್ನಿಯಾಗಿದ್ದಾರೆ. ಕಡಬದ ನಿವೃತ್ತ ಮೆಸ್ಕಾಂ ಇಂಜಿನಿಯರ್ ಶ್ರೀ ಅಣ್ಣಿ ಗೌಡ ಪಣೆಮಜಲು ಮತ್ತು ಶ್ರೀಮತಿ ದುರ್ಗಾವತಿ ಅವರ ಪುತ್ರಿಯಾಗಿರುವ ಅವರು, ಬೆಳ್ತಂಗಡಿ ತಾಲೂಕು ಮಲವಂತಿಗೆಯ ಶ್ರೀ ಕುಂಞಿಯಣ್ಣ ಗೌಡ ಕಲ್ಬೆಟ್ಟು ಹಾಗೂ ಶ್ರೀಮತಿ ಜಾನಕಿ ಅವರ ಸೊಸೆಯಾಗಿದ್ದಾರೆ.
ಇವರ ಸಾಧನೆಗೆ ಶಿಕ್ಷಣ ಕ್ಷೇತ್ರದವರು ಹಾಗೂ ಸಾರ್ವಜನಿಕರಿಂದ ಅಭಿನಂದನೆಗಳು ವ್ಯಕ್ತವಾಗಿವೆ.

