ಕಡಬ ತಾಲೂಕಿನ ಕುಂತೂರಿನಲ್ಲಿ ಅಜ್ಜನಿಗೆ ಬೈದಿದ್ದನ್ನು ಪ್ರಶ್ನಿಸಿದ ಅಬ್ದುಲ್ ರಹಿಮಾನ್ ಎಂಬ ಯುವಕನ ಮೇಲೆ ರಾಝಿಕ್, ಖಾದರ್ ಮತ್ತು ರೌಫ್ ತಂಡದಿಂದ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆದಿದೆ.

ಕಡಬ: ಹಳೆಯ ವಿಚಾರಕ್ಕೆ ಸಂಬಂಧಿಸಿ ಅಜ್ಜನಿಗೆ ಬೈದಿದ್ದನ್ನು ಪ್ರಶ್ನಿಸಿದ ಯುವಕನೋರ್ವನಿಗೆ ತಂಡವೊಂದು ಕಬ್ಬಿಣದ ರಾಡ್ ಹಾಗೂ ಕೈಗಳಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ಕಡಬ ತಾಲೂಕಿನ ಕುಂತೂರು ಮಸೀದಿ ಬಳಿ ಗುರುವಾರ ಸಂಜೆ ನಡೆದಿದೆ.

ಪೆರಾಬೆ ಗ್ರಾಮದ ಕೊಚಕಟ್ಟೆ ನಿವಾಸಿ ಕೆ.ಎ. ಅಬ್ದುಲ್ ರಹಿಮಾನ್ ಯಾನೆ ಅಮಾನ್ (24) ಹಲ್ಲೆಗೊಳಗಾದ ಯುವಕ. ಕುಂತೂರಿನ ರಾಝಿಕ್, ಖಾದರ್ ಹಾಗೂ ರೌಫ್ ಎಂಬವರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *