ಕಡಬ ಪಿಜಕ್ಕಳ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಶ್ರೀ ಮಹಾವಿಷ್ಣು ಭಜನಾ ಮಂಡಳಿ ಪಿಜಕ್ಕಳ- ಕಡಬ ಟ್ರಸ್ಟ್-(ರಿ) ಇದರ ವತಿಯಿಂದ. ಎ.15ರಂದು 40ನೇ ವರ್ಷದ ವಿಷು ಪೂಜೆ ಪ್ರಯುಕ್ತ ಭಜನೋತ್ಸವ, ಸತ್ಯನಾರಾಯಣ ದೇವರ ಪೂಜೆ, ರಂಗ ಪೂಜೆ ನಡೆಯಿತು.

ಭಜನೋತ್ಸವದ ಉದ್ಘಾಟನೆಯನ್ನು ಧಾರ್ಮಿಕ ಮುಂದಾಳು ಸುಂದರ ಗೌಡ ಮಂಡೆಕರ ಇವರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು. ಈ ಸಂದರ್ಭದಲ್ಲಿ ಕಡಬ ಶ್ರೀ ದುರ್ಗಾಂಬಿಕ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನ ಸಮತಿ ಅಧ್ಯಕ್ಷರಾದ ಚಂದ್ರಶೇಖರ ಕರ್ಕೇರ,ಡಾ.ರವೀಂದ್ರ ಮಲ್ಯ,ಕಡಬ ತಾಲ್ಲೂಕು ಭಜನಾ ಪರಿಷತ್ ಅಧ್ಯಕ್ಷ ರಾದ ಸುಂದರ ಗೌಡ ಒಗ್ಗು, ಶ್ರೀಮಹಾವಿಷ್ಣು ಭಜನಾ ಮಂಡಳಿ ಅಧ್ಯಕ್ಷರಾದ ಸುಂದರ ಗೌಡ ಪಿಜಕ್ಕಳ, ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ ಅಮೈ,ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ಕೃಷ್ಣಪ್ಪ ಗೌಡ ಪೂಜಾರಿಮನೆ, ಪುರಂದರ ರೈ ಪಿಜಕ್ಕಳ, ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ನೀಲಾವತಿಶಿವರಾಮ್, ಪಟ್ಟಣ ಪಂಚಾಯತ್ ಸದಸ್ಯರಾದ ದಯಾನಂದ ಪಿ, ಪ್ರಮುಖರಾದ ಸುಂದರ ಗೌಡ ಪಿ.ಎಮ್, ಅಶ್ವತ್ ಪಿ, ಪ್ರಭಾಕರ ಕೆ.ಎಸ್,ಶೇಖರ ಪಿ,ವೆಂಕಟೇಶ ಅಲಂಗೂರು,ಸುಂದರ ಪೂಜಾರಿ ಅಮೈ, ಕಿರಣ್ ,ಕುಶಾಲಪ್ಪ ನಾಯ್ಕ ಕೊರತ್ತಿಗುರಿ, ದಯಾನಂದ ಚಾವಡಿಮನೆ,ಪ್ರಬಾಕರ ಪೂಜಾರಿಮನೆ, ತೀರ್ಥೇಶ್ ಅಮೈ, ಸುರೇಶ್ ಅಮೈ,ದೇವರಾಯ ಆಚಾರ್ಯ,ಮತ್ತಿತರರು ಉಪಸ್ಥಿತರಿದ್ದರು.





ಭಜನೋತ್ಸವ ಕಾರ್ಯಕ್ರಮ ದಲ್ಲಿ ವಿಶೇಷವಾಗಿ ಕೊಂಬಾರು ಗ್ರಾಮದ ಚಿದಾನಂದ ಗೌಡ ದೇವುಪಾಲು ಇವರು ಕನಕದಾಸ ರ ವೇಷಭೂಷಣ ನದಲ್ಲಿ ಕಾಣಿಸಿಕೊಂಡರು. 30ಕ್ಕೂ ಹೆಚ್ಚು ಭಜನಾ ತಂಡಗಳು ಭಜನೋತ್ಸವ ದಲ್ಲಿ ಭಾಗವಹಿಸಿದವು.ವೈಧಿಕ ವಿಧಿವಿಧಾನಗಳನ್ನು ದೇವಾಲಯದ ಅರ್ಚಕರಾದ ಡಾ.ಮೋಹನ್ ರಾವ್ ಹಳ್ಳಂಗೇರಿ ,ಪ್ರಸಾದ್ ಕೆದಿಲಾಯ,ರವರು ನೆರವೇರಿಸಿದರು. ವಿಶೇಷವಾಗಿ ಮೊಟ್ಟಮೊದಲ ಬಾರಿ ವಿಷು ಪೂಜೆಯಲ್ಲಿ ಸಿಡಿಮದ್ದು ಪ್ರದರ್ಶನವು ಸೇರಿದ ಸಭೀಕರನ್ನು ಸಂತೋಷಗೊಳಿಸಿತು.
ಕಾರ್ಯಕ್ರಮದಲ್ಲಿ ಶ್ರೀ ಮಹಾವಿಷ್ಣು ಭಜನಾಮಂಡಳಿ ಪದಾಧಿಕಾರಿಗಳು, ಸದಸ್ಯರು, ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯರು, ದೇವಳದ ಭಕ್ತಾದಿಗಳು ಸಹಕರಿಸಿದರು.



