ಪುತ್ತೂರು: ಕಾರ್ಮಿಕರ ದಿನಾಚರಣೆಯ ಅಂಗವಾಗಿ SDTU ಆಟೋ ಯೂನಿಯನ್ ವತಿಯಿಂದ ಪ್ರಜ್ಞಾ ಆಶ್ರಮ ಬೀರಮಾಲೆ ಪುತ್ತೂರಿನಲ್ಲಿ ಹಣ್ಣು ಹಂಪಲು ವಿತರಿಸುವ ಮೂಲಕ ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಆಶ್ರಮದ ಉಸ್ತುವಾರಿಗಳಾದ ಜ್ಯೋತಿ ಹಾಗೂ ಅಣ್ಣಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ SDTU ಪುತ್ತೂರು ಉಪಾಧ್ಯಕ್ಷ ಆಸೀಫ್ ಉಪ್ಪಿನಂಗಡಿ, ಪ್ರ ಕಾರ್ಯದರ್ಶಿ ಇಲ್ಯಾಸ್ ಪೋಲ್ಯ, ಜೊತೆ ಕಾರ್ಯದರ್ಶಿ ರಹ್ಮನ್ ಪಡೀಲ್, ಟ್ರೇಡ್ ಯೂನಿಯನ್ ಸದಸ್ಯರಾದ ಮಹಮ್ಮದ್ ಕುಂಞ ಬಾಬಾ ಮತ್ತು ನೌಷದ್ ಸಾಲ್ಮರ, ಮಾಜಿ ಅಧ್ಯಕ್ಷ ಬಾತೀಶ್ ಬಡಕೋಡಿ, ಅಲ್ ನಜತ್ ಮುಸ್ಲಿಂ ಯೂಥ್ ಫೆಡರೇಶನ್ ಉಪಾಧ್ಯಕ್ಷ ಇರ್ಷಾದ್ ಸರ್ವೇ ಸೇರಿದಂತೆ SDTU ಆಟೋ ಯೂನಿಯನ್ ಪುತ್ತೂರು ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *