ಆಲಂಕಾರು:  ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ದಕ್ಷ ಸೇವೆ ಸಲ್ಲಿಸಿದ್ದ ನಿಂಗರಾಜು ಕೆ.ಪಿ. ಅವರು ಮಂಗಳೂರು ದಕ್ಷಿಣದ ವಾಮಂಜೂರಿನ ತಿರುವೈಲ್ ಸರ್ಕಾರಿ ಶಾಲೆಗೆ ಪದವೀದರೇತರ ಮುಖ್ಯ ಶಿಕ್ಷಕರಾಗಿ ವರ್ಗಾವಣೆಗೊಂಡಿದ್ದಾರೆ.

ಮೂಲತಃ ಹಾಸನ ಜಿಲ್ಲೆಯ ಹಾಸನ ತಾಲೂಕಿನ ಕಾರ್ಲೆ ಕೊಪ್ಪಲಿನವರಾದ ಇವರು, 2013ರಲ್ಲಿ ಮುಖ್ಯಶಿಕ್ಷಕರಾಗಿ ಭಡ್ತಿ ಪಡೆದು ಆಲಂಕಾರು ಸರ್ಕಾರಿ ಶಾಲೆಗೆ ವರ್ಗಾವಣೆಗೊಂಡಿದ್ದರು. ಅಲ್ಲಿ ಹತ್ತು ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ ಬಳಿಕ, 2023ರಲ್ಲಿ ಸವಣೂರು ಸರ್ಕಾರಿ ಶಾಲೆಗೆ ವರ್ಗಾವಣೆಯಾಗಿದ್ದರು. ಇದೀಗ ಮಂಗಳೂರಿನ ವಾಮಂಜೂರು ತಿರುವೈಲ್ ಶಾಲೆಗೆ ನಿಯುಕ್ತಿಗೊಂಡಿದ್ದಾರೆ.

 ನಿಂಗರಾಜು ಕೆ.ಪಿ. ಅವರು ಶಿಕ್ಷಣ ಇಲಾಖೆಯ ಜವಾಬ್ದಾರಿಗಳ ಜೊತೆಗೆ ಸಂಘಟನಾತ್ಮಕವಾಗಿಯೂ ಸಕ್ರಿಯರಾಗಿದ್ದಾರೆ. ಪ್ರಸ್ತುತ ಇವರು ದಕ್ಷಿಣ ಕನ್ನಡ ಜಿಲ್ಲಾ ಮುಖ್ಯಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಡಬ ತಾಲೂಕು ಘಟಕದ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರ ಶೈಕ್ಷಣಿಕ ಸೇವೆ ಮತ್ತು ಸಂಘಟನಾ ಚತುರತೆಗೆ ಪೂರಕವಾಗಿ ಹೊಸ ಶಾಲೆಯಲ್ಲಿಯೂ ಉತ್ತಮ ಕಾರ್ಯವೈಖರಿ ಮುಂದುವರಿಯಲಿ ಎಂದು ಅಭಿಮಾನಿಗಳು ಹಾಗೂ ಶಿಕ್ಷಕ ವೃಂದದವರು ಶುಭ ಹಾರೈಸಿದ್ದಾರೆ.

Leave a Reply

Your email address will not be published. Required fields are marked *