ಪುತ್ತೂರು ತಾಲ್ಲೂಕು ಬಲ್ನಾಡುಗ್ರಾಮದ ಬೆಳಿಯೂರುಕಟ್ಟೆ ಮುಂಡೇಲು ನಿವಾಸಿ ಸೀತಾ (61ವರ್ಷ) ಮಹಿಳೆ ನಾಪತ್ತೆ.-PRIME TV

ಪುತ್ತೂರು: ಬಲ್ನಾಡು ಗ್ರಾಮದ ಬೆಳಿಯೂರುಕಟ್ಟೆ ಮುಂಡೇಲು ನಿವಾಸಿ, ಮಹಿಳೆಯೊಬ್ಬರು ನಾಪತ್ತೆಯಾದ ಬಗ್ಗೆ ವರದಿಯಾಗಿದೆ. ಕುಂಞ ನಲಿಕೆ ಅವರ ಪತ್ನಿ ಸೀತಾ (61ವರ್ಷ) ನಾಪತ್ತೆಯಾದವರು. ಅವರು ಡಿ.10ರಿಂದ ನಾಪತ್ತೆಯಾಗಿದ್ದಾರೆ. ಸೀತಾ ಅವರ ಮಾಹಿತಿ ತಿಳಿದು ಬಂದಲ್ಲಿ ದೂರವಾಣಿ 9449943725 ಅನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

ಪುತ್ತೂರು ತಾ. ಪಂ.ನ ನೂತನ ಕಚೇರಿ ಕಟ್ಟಡಕ್ಕೆ ಶಂಕುಸ್ಥಾಪನೆ.-PRIME TV

ಪುತ್ತೂರು: ಕರ್ನಾಟಕ ಸರಕಾರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ವತಿಯಿಂದ 5.50 ಕೋಟಿ ವೆಚ್ಚದಲ್ಲಿ ಪುತ್ತೂರು ತಾಲೂಕು ಪಂಚಾಯತ್‍ಗೆ ನಿರ್ಮಾಣಗೊಳ್ಳಲಿರುವ ನೂತನ ಕಚೇರಿ ಕಟ್ಟಡದ ಶಂಕುಸ್ಥಾಪನ ಕಾರ್ಯಕ್ರಮ ನಗರದ ಪರ್ಲಡ್ಕದಲ್ಲಿ ಶನಿವಾರ ನಡೆಯಿತು. ಗುದ್ದಲಿ…

ಮೈರೋಳ್ತಡ್ಕ ಉ.ಹಿ.ಪ್ರಾ. ಶಾಲಾ ಅಮೃತ ಮಹೋತ್ಸವ ಪ್ರಯುಕ್ತ ಪ್ರತಿಭಾ ಪುರಸ್ಕಾರ ಮತ್ತು ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ-PRIME TV

ಬಂದಾರು : ಬಂದಾರು ಗ್ರಾಮ ಮೈರೋಳ್ತಡ್ಕ ದ.ಕ.ಜಿಲ್ಲಾ ಪಂಚಾಯತ್ ಉನ್ನತಿಕರಿಸಿದ ಪ್ರಾಥಮಿಕ ಶಾಲಾ ಅಮೃತ ಮಹೋತ್ಸವ ಪ್ರಯುಕ್ತ ಪ್ರತಿಭಾ ಪುರಸ್ಕಾರ ಮತ್ತು ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಡಿ.13 ರಂದು ಶಾಲಾ ವಠಾರದಲ್ಲಿ ನೆರವೇರಿತು. ಉದ್ಯಮಿಗಳಾದ ಕಿರಣ್ ಚಂದ್ರ ಪುಷ್ಪಗಿರಿ ಇವರು…

ಮೈಸೂರಿನಲ್ಲಿ ರಸ್ತೆ ಅಪಘಾತ: ಸುಳ್ಯದ ಯುವಕ ಸಾವು..!-PRIME TV

ಮೈಸೂರು: ಮೈಸೂರು ಬಳಿಯ ಮಳವಳ್ಳಿ ಪ್ರದೇಶದಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸುಳ್ಯದ ಯುವಕನೊಬ್ಬ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಮೃತರನ್ನು ಸುಳ್ಯ ತಾಲೂಕಿನ ಉಭರಡ್ಕ ನಿತ್ತೂರು ಗ್ರಾಮದ ಕಲ್ತಾನ ನಿವಾಸಿ ಶೇಷಪ್ಪ ನಾಯಕ್ ಅವರ ಪುತ್ರ ದೀಕ್ಷಿತ್ (25) ಎಂದು…

ಪ್ರಯಾಣಿಕರ ಆಕ್ರೋಶಕ್ಕೆ ಬೆಲೆ: ವಿಮಾನ ವಿಳಂಬದಿಂದ ತೀವ್ರ ಸಂಕಷ್ಟ ಅನುಭವಿಸಿದವರಿಗೆ ಇಂಡಿಗೋದಿಂದ ₹500 ಕೋಟಿ ಪರಿಹಾರ! -PRIME TV

ನವದೆಹಲಿ: ನಿರ್ಗಮಿಸಿದ 24 ಗಂಟೆಗಳ ಒಳಗೆ ವಿಮಾನಗಳನ್ನು ರದ್ದುಗೊಳಿಸಿದ ಮತ್ತು ದೇಶಾದ್ಯಂತದ ಕೆಲವು ವಿಮಾನ ನಿಲ್ದಾಣಗಳಲ್ಲಿ ತೀವ್ರವಾಗಿ ಸಿಲುಕಿಕೊಂಡ ಗ್ರಾಹಕರಿಗೆ ಪರಿಹಾರದ ಮೊತ್ತವು 500 ಕೋಟಿ ರೂ.ಗಳನ್ನು ಮೀರಲಿದೆ ಎಂದು ಅಂದಾಜಿಸಿದೆ ಎಂದು ಇಂಡಿಗೋ ಶುಕ್ರವಾರ ತಿಳಿಸಿದೆ. ಶುಕ್ರವಾರ ಎಕ್ಸ್ ನಲ್ಲಿ…

ಕಾಫಿ ಬೀಜ ಕಳವು ಪ್ರಕರಣ ಆರೋಪಿಗೆ ನಿರೀಕ್ಷಣಾ ಜಾಮೀನು-PRIME TV

ಪುತ್ತೂರು: ಕಬಕ ಗ್ರಾಮದ ನೆಹರುನಗರದಲ್ಲಿ ನಿಲ್ಲಿಸಿದ್ದ ಲಾರಿಯಿಂದ ಲಕ್ಷಾಂತರ ರೂ. ಮೌಲ್ಯದ ಕಾಫಿ ಬೀಜಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 7 ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಆಲೆಪ್ಪ ಭಟ್, ರಿಕ್ಷಾ ಚಾಲಕರಾದ…

ಪುತ್ತೂರು: ಒಂದೂವರೆ ತಿಂಗಳ ಗಂಡು ಮಗು ಅಸ್ವಸ್ಥಗೊಂಡು ಮೃತ್ಯು-PRIME TV

ಪುತ್ತೂರು: ಗುತ್ತಿಗಾರು ಗ್ರಾಮದ ಕಮಿಲ ಮಾಧವ–ವೀಣಾ ದಂಪತಿಯ ಒಂದೂವರೆ ತಿಂಗಳ ಗಂಡು ಮಗು ನಿಶ್ಚಿತ್ ಅಸ್ವಸ್ಥಗೊಂಡು ಡಿಸೆಂಬರ್ 9ರಂದು ಮೃತಪಟ್ಟಿರುವ ಘಟನೆ ವರದಿಯಾಗಿದೆ. ಮಗುವಿನ ತಾಯಿ ವೀಣಾ ಅವರು ಮಗುವಿನೊಂದಿಗೆ ಸವಣೂರಿನ ಪುಣ್ಣಪ್ಪಾಡಿ ಗ್ರಾಮದ ಒಡಂತರ್ಯದ ತವರಿನಲ್ಲಿದ್ದುಕೊಂಡಿದ್ದರು. ಡಿಸೆಂಬರ್ 5ರಂದು ಮಗುವಿಗೆ…

ಮಾಣಿ: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಮತ್ತೊಂದು ಕಾರು ಡಿಕ್ಕಿ – ಓರ್ವರಿಗೆ ಗಾಯ-PRIME TV

ಮಾಣಿ: ಹೋಟೆಲ್ ಬಳಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಮತ್ತೊಂದು ಕಾರು ಬಂದು ಡಿಕ್ಕಿ ಹೊಡೆದ ಘಟನೆ ಮಾಣಿಯಲ್ಲಿ ನಡೆದಿದೆ. ಅಪಘಾತದ ಪರಿಣಾಮ ಒಬ್ಬರಿಗೆ ಗಾಯಗಳಾಗಿದ್ದು, ಗಾಯಾಳುವಿಗೆ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಘಟನೆಯಿಂದಾಗಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಹಾನಿಯಾಗಿದೆ.…

ಕರಾವಳಿಯಲ್ಲಿ ಪ್ರಥಮ ಬಾರಿಗೆ ‘ಸಿಲ್ವರ್ ವುಡ್’ ಮರಗಳ ಯಶಸ್ವಿ ಪ್ರಯೋಗ-PRIME TV

ಪುತ್ತೂರು:ಕೊಡಗು ಹಾಗೂ ಚಿಕ್ಕಮಗಳೂರಿನಂತಹ ತಂಪಾದ ಹವಾಮಾನ ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುವ ‘ಸಿಲ್ವರ್ ವುಡ್’ ಮರಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಬೆಳೆಸುವ ಹೊಸ ಪ್ರಯೋಗಕ್ಕೆ ಪುತ್ತೂರಿನಲ್ಲಿ ಯಶಸ್ಸು ದೊರೆತಿದೆ. ಫ್ಲೈವುಡ್ ಹಾಗೂ ಪೀಠೋಪಕರಣಗಳ ತಯಾರಿಕೆಗೆ ಹೆಚ್ಚಿನ ಬೇಡಿಕೆ ಇರುವ ಈ ಮರವನ್ನು ಪರ್ಯಾಯ…

ಕಾರ್ಕಳದ ಶ್ರೀಮತಿ ರಮಿತಾ ಸೂರ್ಯವಂಶಿ ಗೋನಂದಿ ಸೇವಾದಳ ಕರ್ನಾಟಕ ಇದರ ರಾಜ್ಯ ಮಹಿಳಾ ಸಂಚಾಲಕಿಯಾಗಿ ಆಯ್ಕೆ-PRIME TV

ಗೋ ಸೇವಾ ಕಾರ್ಯ ಚಟುವಟಿಕೆ ದೇಶಾದ್ಯಂತ ಮಾಡುವ ಉದ್ದೇಶದಿಂದ ಗೋವಿನ ರಕ್ಷಣೆ ಮತ್ತು ಪೋಷಣೆ ಮುಖ್ಯ ವಾಗಿ ಆಗಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯದ ಪ್ರತಿ ಯೊಂದು ಜಿಲ್ಲೆಗಳಲ್ಲಿ ಮಹಿಳಾ ಜಾಗೃತಿ ಕಾರ್ಯಕ್ರಮದ ಅಗತ್ಯ ಇರುದರಿಂದ ತಂಡದ ರಾಜ್ಯ ಮಹಿಳಾ ಸಂಚಾಲಕಿ ಆಗಿ…