ಕಾಸರಗೋಡು ಮೀಪುಗುರಿ ಪಾರೆಕಟ್ಟೆ ನಿವಾಸಿ,ಪ್ರಸ್ತುತ ಕೂಡ್ಲು ಗಂಗೆ ರಸ್ತೆಯ “ಶ್ರೀ ಶೈಲ” ನಿವಾಸದ, ಕಾಸರಗೋಡಿನ ನಿವೃತ್ತ ಸಹಾಯಕ ಅಬಕಾರಿ
ಇನ್ಸ್ ಪೆಕ್ಟರ್ (81 ವರ್ಷ) ಅವರು ಅಲ್ಪಕಾಲದ ವಯೋ ಸಹಜ ಅನಾರೋಗ್ಯದಿಂದ 2026 ಏಪ್ರಿಲ್ 17ರಂದು ನಿಧನರಾದರು.
ಪತ್ನಿ ಕೆ.ವಿಜಯಲಕ್ಷ್ಮಿ ಪುತ್ರಿಯರಾದ ನಮಿತಾ ಶೈಲೇಂದ್ರ ಹೂಡೆ ಮೈಸೂರು , ರಾಣಿ ವೇಣುಪ್ರಸಾದ್ ಬಜ್ಪೆ, ಪುತ್ರ ಮಂಜುಪ್ರಸಾದ್ ಕೆ. ಸೊಸೆ ಅಂಬಿಕಾ ಡಿ.ಕೆ ಕುಂದಾಪುರ, ಸಹೋದರ ನಿವೃತ್ತ ಸೈನಿಕ ಕೆ.ತುಕರಾಮ ಪಾರೆಕಟ್ಟೆ ಹಾಗೂ ಸಹೋದರಿಯರು,ಬಂಧು ಬಳಗವನ್ನು ಅಗಲಿದ್ದಾರೆ.

ಕೆ.ರಘುರಾಮ ಅವರ ನಿಧನಕ್ಕೆ ಕೇರಳ ರಾಜ್ಯ ಕೋಟೆಯವರ ಯಾನೆ ಕೋಟೆಗಾರರ ಸೇವಾ ಸಂಘ(ರಿ.),ಕೂಡ್ಲು ಹಾಗೂ ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ(ರಿ.), ಕಾಸರಗೋಡು ಕೂಡ್ಲು ಉಪಸಂಘ,ಶ್ರೀ ರಾಮನಾಥ ದೇವಸ್ಥಾನ ಬಂದಡ್ಕ ,ಶ್ರೀ ರಾಮನಾಥ ದೇವರ ಮನೆ, ಹೊಸ ಬಸ್ಸು ನಿಲ್ದಾಣ ಸಮೀಪ ನುಳ್ಳಿಪಾಡಿ ಕಾಸರಗೋಡು ಸಂತಾಪ ವ್ಯಕ್ತಪಡಿಸಿದೆ.
ಕಾಸರಗೋಡು ಕನ್ನಡ ಗ್ರಾಮದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರು,ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕದ ಅಧ್ಯಕ್ಷರು, ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರು ಹಾಗೂ ವಿಶ್ವ ರಾಮಕ್ಷತ್ರಿಯ ಮಹಾಸಂಘ(ರಿ. ), ಕುಂದಾಪುರ ಇದರ ಕಾರ್ಯಕಾರಿ ಸಮಿತಿ ಸದಸ್ಯ ಶಿವರಾಮ ಕಾಸರಗೋಡು ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದರು.

Leave a Reply

Your email address will not be published. Required fields are marked *