ಪುತ್ತೂರು:ಬಾಡಿಗೆಗೆ ನೀಡಲಾದ ಮನೆಗಳಲ್ಲಿ ತೆರಿಗೆಯಲ್ಲಿ ವಂಚನೆ ಮಾಡಿದ್ದು ರೂ.2,03,521/- ವ್ಯತ್ಯಾಸ ದರ ಪಾವತಿಸಲು ಪುತ್ತೂರು ನಗರಸಭೆ ಆದೇಶ ಹೊರಡಿಸಿದೆ.

ಪುತ್ತೂರು ನಗರಸಭಾ ವ್ಯಾಪ್ತಿಯ ಬನ್ನೂರಿನ ನಂದಿಲ ಎಂಬಲ್ಲಿ ಹಾಗೂ ಪರ್ಲಡ್ಕ ಕಲ್ಲಿಮಾರು ಹೀಗೆ ಎರಡು ಕಡೆ ವಾಸ್ತವ್ಯದ ಮನೆಗಳನ್ನು ಬಾಡಿಗೆಗೆ ನೀಡಿ ಹಲವಾರು ವರ್ಷಗಳಿಂದ ನಗರಸಭೆಗೆ ತೆರಿಗೆ ವಂಚನೆ ಮಾಡಿರುವ ಕುರಿತು ಕಲ್ಲಿಮಾರು ನಿವಾಸಿ, ಮಾಯಿದೆ ದೇವುಸ್ ಚರ್ಚ್ ನ 21 ಆಯೋಗಗಳ ಸಂಯೋಜಕ ಪಾವ್ಲ್ ಹೆರಾಲ್ಡ್ ಮಸ್ಕರೇನ್ಹಸ್ ಹಾಗೂ ಅವರ ಪತ್ನಿ ರೋಸ್ಲಿನ್ ಫ್ಲೇವಿ ಲೋಬೊ ಎಂಬವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪುತ್ತೂರು ಸಾಮೆತ್ತಡ್ಕ ನಿವಾಸಿ ಅರುಣ್ ಪಿಂಟೊ ಎಂಬವರು ನಗರಸಭೆಗೆ ಲಿಖಿತ ದೂರು ಸಲ್ಲಿಸಿದ್ದರು. ದೂರಿನ ತನಿಖೆ ನಡೆಸಿದ ಪುತ್ತೂರು ನಗರಸಭೆ ಅಧಿಕಾರಿಗಳು ಬನ್ನೂರು ನಂದಿಲದಲ್ಲಿರುವ ಪಾವ್ಲ್ ಹೆರಾಲ್ಡ್ ಮಸ್ಕರೇನ್ಹಸ್ ಹೆಸರಿನಲ್ಲಿರುವ ಕ.ನಂಬ್ರ 1-81/3 ಗೆ ರೂ.51765/- ಹಾಗೂ ಅವರ ಪತ್ನಿ ಹೆಸರಿನಲ್ಲಿರುವ ಕಲ್ಲಿಮಾರಿನ ಕ.ನಂಬ್ರ 4-355/2 ಗೆ ರೂ.151756/- ಹೀಗೆ ಒಟ್ಟು ರೂ.2,03,521/- ನ್ನು ನೋಟೀಸ್ ಸಿಕ್ಕಿದ ಏಳು ದಿನಗಳ ಒಳಗೆ ನಗರಸಭೆಗೆ ಪಾವತಿಸಲು ಆದೇಶ ನೀಡಿರುತ್ತಾರೆ.

ಪಾವ್ಲ್ ಹೆರಾಲ್ಡ್ ಮಸ್ಕರೇನ್ಹಸ್ ರವರು ಸಂತ ಫಿಲೋಮಿನಾ ಕಾಲೇಜಿನ ಬಿ.ಎಸ್.ಡಬ್ಲ್ಯೂ ವಿಭಾಗದ ನಿವೃತ್ತ ಉಪನ್ಯಾಸಕರಾಗಿ ಹಾಗೂ ಅವರ ಪತ್ನಿ ರೋಸ್ಲಿನ್ ಫ್ಲೇವಿ ಲೋಬೊರವರು ಸಂತ ವಿಕ್ಟರನ ಬಾಲಿಕಾ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Leave a Reply

Your email address will not be published. Required fields are marked *